ಕುಮಟಾ: ಮಹಾಸತಿ ಗೆಳೆಯರ ಬಳಗ ಮುರೂರು ನಡೆಸಿದ 3ದಿನಗಳ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಎಂ ಜಿ ಭಟ್ ನಮ್ಮ ತಾಯ್ನಾಡು ಅತ್ಯಂತ ಶ್ರೇಷ್ಠ ವಾದದ್ದು ಜಗತ್ತಿನಲ್ಲಿಯೇ ಅತ್ಯಂತ ಪವಿತ್ರವಾದ ಮಣ್ಣು ನಮ್ಮ ಭಾರತದ್ದು. ನಮ್ಮ ದೇಶದಲ್ಲಿ ಆಗಿಹೋದ ಋಷಿ ಮುನಿಗಳೆಷ್ಟೋ, ಸಾಧು ಸಂತರುಗಳೆಷ್ಟೋ, ಗೊತ್ತಿಲ್ಲಾ. ನಮ್ಮದು ಒಂದು ತಪೋಭೂಮಿ. ಇಲ್ಲಿ ಹುಟ್ಟಿರುವುದೇ ನಮ್ಮ ಸೌಭಾಗ್ಯ. ಅನೇಕ ಜನ್ಮಗಳ ಪುಣ್ಯದ ಫಲವಾಗಿ ನಾವಿಲ್ಲಿ ಜನ್ಮತಳೆದಿದ್ದೇವೆ. ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವು ನೀವೆಲ್ಲ ನಮ್ಮ ಜನ್ಮಭೂಮಿಗಾಗಿ ಏನನ್ನಾದರೂ ಮಾಡಲೇಬೇಕು. ನಮ್ಮ ದೇಶ ವಿಶ್ವಗುರು ಆಗಬೇಕು ಅದಕ್ಕೆ ನಾವು ನೀವೆಲ್ಲ ಒಂದಾಗಿ ದೇಶಕ್ಕಾಗಿ ದುಡಿಯಬೇಕು.
ಸಮಾಜಕ್ಕಾಗಿ, ದೇಶಕ್ಕಾಗಿ ನಾವು ಕೆಲಸ ಮಾಡಿದ್ರೆ ಅದರಲ್ಲಿರೋ ಸುಖ, ಆತ್ಮ ತೃಪ್ತಿ ಬೇರೆಲ್ಲೂ ಸಿಗದು ಹಾಗಾಗಿ ದೇಶಕ್ಕಾಗಿ ನಮ್ಮ ಜೀವನದ ಅಲ್ಪ ಭಾಗವನ್ನು ಮೀಸಲು ಇಡೋಣ ಅಂತಹ ಪ್ರತಿಜ್ಞೆ ಇಂದೇ ಮಾಡೋಣ ಎಂದು ಅತ್ಯಂತ ಅರ್ಥಪೂರ್ಣ ಸಂದೇಶವನ್ನು ಯುವಜನತೆಗೆ ನೀಡಿದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಪ್ರಮುಖ ರಾಮಚಂದ್ರ ಮಡಿವಾಳ ವಹಿಸಿದ್ದರು. ಪ್ರಮುಖ ರಾದ ಬಿ. ಡಿ. ಮುಕ್ರಿ, ಶ್ರೀಧರ್ ಕಲಗದ್ದೆ, ಹಾಗೂ ಇತರರು ಇದ್ದರು. ಸಂಘಟನೆ ಕಾರ್ಯಕರ್ತರು ಸಹಕರಿಸಿದರು.