ಹೊನ್ನಾವರ: ಸಾಂಪ್ರದಾಯಿಕ ಶೈಲಿ ಮತ್ತು ಪೌರಾಣಿಕ ಚೌಕಟ್ಟುಗಳನ್ನು ಉಳಿಸಿಕೊಂಡು ಹೊಸ ಆವಿಷ್ಕಾರಗಳೊಂದಿಗೆ ಮುನ್ನಡೆಯುತ್ತಿರುವ ಹೊನ್ನಾವರ ತಾಲೂಕಿನ ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯು ವೈವಿಧ್ಯಮಯ ಕಲಾಪ್ರಕಾರಗಳ ಪ್ರದರ್ಶನದ ಮೂಲಕ ನಾಡಿನ ಕಲಾಸಕ್ತರ ಗಮನ ಸೆಳೆಯುತ್ತಿದೆ.

ಈ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಫೆ. 20 ರಿಂದ 24ರವರೆಗೆ ಐದು ದಿನಗಳ ಕಾಲ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯಲಿದೆ. ನಾಟ್ಯೋತ್ಸವದ ಕಲಾಕ್ಷೇತ್ರದಲ್ಲಿ ಮಿಂಚಿ ಮರೆಯಾದ ಕಲಾಚೇತನಗಳ ಸ್ಮರಣೆ, ಸಾಧನೆ ಹಾದಿಯಲ್ಲಿ ಎತ್ತರಕ್ಕೆ ಏರಿದ ಕಲಾವಿದರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ, ವಿವಿಧ ಕಲಾ ಪ್ರಕಾರಗಳ ತರಬೇತಿ ಶಿಬಿರ ಹೀಗೆ ಹಲವು ಬಗೆಗಳಲ್ಲಿ ಭಾರತೀಯ ರಂಗಪರಂಪರೆಯ ವಿವಿಧ ಮಜಲುಗಳು ಅನಾವರಣಗೊಳ್ಳಲಿವೆ.

RELATED ARTICLES  ಗೋಕರ್ಣ ಗೌರವದಲ್ಲಿ ಶ್ರೀ ಶ್ರೀ ನಾಗೇಶ್ವರ ಚೈತನ್ಯ ಮಹಾಸ್ವಾಮಿಗಳು

20 ರಂದು ಸಂಜೆ 5ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಅಧ್ಯಕ್ಷತೆ ವಹಿಸುವರು. ಅರ್ಥಧಾರಿ ಡಾ. ಪ್ರಭಾಕರ ಜೋಶಿ ಅವರು ಅಗಲಿದ ಚೇತನಗಳನ್ನು ಸ್ಮರಿಸುವರು. ಮಾವಿನಕೆರೆ ಕೃಷ್ಣ ಯಾಜಿ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೈಸೂರಿನ ಜಿ.ಎಸ್. ಭಟ್ ಬರೆದ ‘ಇಡಗುಂಜಿ ಮೇಳ 85’ ಕೃತಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸುವರು. ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಪದ್ಮಶ್ರೀ ಪುರಸ್ಕೃತ ಡಾ. ಪದ್ಮಾಸುಬ್ರಹ್ಮಣ್ಯಂ ಅವರಿಗೆ ನಾಟ್ಯೋತ್ಸವದ ಕೊನೇ ದಿನ 24 ರಂದು ಸಂಜೆ 5 ಗಂಟೆಗೆ ಪ್ರದಾನ ಮಾಡಲಾಗುವುದು.

RELATED ARTICLES  ಹೊನ್ನಾವರಕ್ಕೆ ಬಂದಿದ್ದ ಕುಮಟಾದ ಕಸ ತುಂಬಿದ ಗಾಡಿ ವಾಪಸ್…!