ಕುಮಟಾ: ಉತ್ತಮ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಕಳೆದೆರಡು ವರ್ಷಗಳಿಂದ ಹಲವಾರು ಜನೋಪಯೋಗಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಮಾದರೀ ಸಂಘವಾಗಿ ರೂಪುಗೊಳ್ಳುತ್ತಿರುವ ಕುಮಟಾದ “ವಿವೇಕ ನಗರ ವಿಕಾಸ ಸಂಘ (ರಿ.)” ವು ತನ್ನ ದ್ವಿತೀಯ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದು ,ಇದರ ಅಂಗವಾಗಿ ವಿವೇಕ ನಗರ ಉತ್ಸವ ವನ್ನು ಹಮ್ಮಿಕೊಂಡಿದೆ.
ಫೆಬ್ರುವರಿ 23 ರವಿವಾರ ಸಂಜೆ 5.30 ಕ್ಕೆ ಕುಮಟಾ ವಿವೇಕನಗರ “ಶಾರದಾ ನಿಲಯ” ಸರಕಾರೀ ಪ್ರಾಥಮಿಕ ಶಾಲಾ ಆವಾರದಲ್ಲಿ ಜರುಗಲಿರುವ ಈ ಉತ್ಸವವನ್ನು ವಿಶ್ರಾಂತ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಎನ್.ಟಿ.ಪ್ರಮೋದರಾವ್ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ
ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ಎಲ್.ಹೆಗಡೆ,
ಆರಕ್ಷಕ ವೃತ್ತ ನಿರೀಕ್ಷಕ ಪರಮೇಶ್ವರ ಗುನಗಾ ಪಾಲ್ಗೊಳ್ಳಲಿದ್ದಾರೆ.
ಸಂಘದ ಅಧ್ಯಕ್ಷರಾಗಿರುವ ಪ್ರಾಧ್ಯಾಪಕ ಡಾ.ಎಮ್.ಆರ್.ನಾಯಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯೆ ಶ್ರೀಮತಿ ಗೀತಾ ಮುಕ್ರಿ,
ಎಸ್.ಡಿ.ಎಮ್.ಸಿ.ಅಧ್ಯಕ್ಷ ಶ್ರೀಕಾಂತ ನಾಯ್ಕ,
ಮುಖ್ಯಾಧ್ಯಾಪಕ ದೇವು ಎಸ್.ಮುಕ್ರಿ ಉಪಸ್ಥಿತರಿರುತ್ತಾರೆ.
ಸಭಾ ಕಾರ್ಯಕ್ರಮ ದ ನಂತರ ನಡೆಯುವ “ಸಾಂಸ್ಕೃತಿಕ ಕಾರ್ಯಕ್ರಮ”ದಲ್ಲಿ ಆಕರ್ಷಕ ಸಮೂಹ ನೃತ್ಯ ,ಕೋಲಾಟ,ಜಾನಪದ ನೃತ್ಯ,ಭರತ ನಾಟ್ಯ,
ಮಿಮಿಕ್ರಿ,ಸಂಗೀತ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಮನರಂಜಿಸಲಿವೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಕಾರ್ಯಕಾರೀ ಸಮೀತಿಯ ಸರ್ವ ಸದಸ್ಯರ ಪರವಾಗಿ ಅಧ್ಯಕ್ಷ ಡಾ.ಎಮ್.ಆರ್.ನಾಯಕ ವಿನಂತಿಸಿಕೊಂಡಿದ್ದಾರೆ.