ಕುಮಟಾ : ಉತ್ತರಕನ್ನಡ ಜಿಲ್ಲೆಯ ಹಿರಿಯ ಸಹಕಾರಿ ಧುರೀಣರು, ಮಾಜಿ ವಿಧಾನಪರಿಷತ್ ಸದಸ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಕೆಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ಆರ್ ಎಸ್ ಭಾಗವತ ಅವರು ನಿಧನರಾಗಿದ್ದಾರೆ.

1932 ರಂದು ಕುಮಟಾದಲ್ಲಿ ಜನಿಸಿದ ಇವರು ವಕೀಲಿ ವೃತ್ತಿ ನಡೆಸಿದವರು. 1960 ರಲ್ಲಿ ಕುಮಟಾ ಪುರಸಭೆಯು ಸದಸ್ಯರಾಗಿ ಆಯ್ಕೆಯಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಎಂ.ಪಿ ಸೊಸೈಟಿಯ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.1966ರಲ್ಲಿ ಕುಮಟಾ ತಾಲೂಕಾ ಪ್ರಾಥಮಿಕ ಸಹಕಾರ ಬ್ಯಾಂಕ್ ಸ್ಥಾಪಿಸಿ, ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಹಕಾರಿ ಯೂನಿಯನ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದವರು.

RELATED ARTICLES  ಚುನಾವಣಾ ದಿನವೇ ನೀರಿಗಾಗಿ ಪರದಾಡಿದ ಗ್ರಾಮಸ್ಥರು:ಜನ ಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಜನತೆ

ದಿ. ಆರ್ ಎಸ್ ಭಾಗವತರು ಅನೇಕ ದಶಕಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು. ಅವರು ಸಾಮಾಜಿಕ ಅಭಿವೃದ್ಧಿಗಾಗಿ ಸಾಕಷ್ಟು ವರ್ಷಗಳ ಕಾಲ ದುಡಿದಿದ್ದಾರೆ. ಇವರ ನಿಧನ ಅವರ ಕುಟುಂಬಸ್ಥರಿಗೆ ನೋವು ಉಂಟು ಮಾಡಿದೆ. ಮೃತರ ನಿಧನಕ್ಕೆ ಅವರ ಆಪ್ತರು ಹಾಗೂ ಹಿತೈಸಿಗಳು ಸಂತಾಪ ಸೂಚಿಸಿದ್ದಾರೆ.

RELATED ARTICLES  ಯಕ್ಷಗಾನ ಒಂದು ಸಂಪೂರ್ಣ ಕಲೆ ಅದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ ಇದೆ : ಎಂ.ಜಿ ಭಟ್ಟ