ಹೊನ್ನಾವರ: ಅತ್ಯುತ್ತಮ ಸಂಘಟನಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಸಂಗೀತ ಭಾರತಿ ಹೊಸಪೇಟೆ ಇವರು ನೀಡುವ ರಾಜ್ಯ ಮಟ್ಟದ ಸಾಹಿತ್ಯ ಸೇವಾ ದುರಂಧರ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಯುವ ಸಾಹಿತಿ ಶಿಕ್ಷಕ ಶ್ರೀ ಸಂದೀಪ ಭಟ್ಟ ಭಾಜನರಾಗಿದ್ದಾರೆ.

23/02/2020 ರಂದು ಹೊಸಪೇಟೆಯಲ್ಲಿ ನಡೆಯುವ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆದಿಗುರು ಶ್ರೀ ಶಂಕರ ಸಾಹಿತ್ಯ ಪರಿಷತ್ತು ಚಿತ್ತವಾಡಿ, ಹೊಸಪೇಟೆ ಇದರ ಸಂಸ್ಥಾಪಕರೂ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆದ ಶ್ರೀ ಎಚ್.ಪಿ.ಕಲ್ಲಂಭಟ್ ಅವರು ಈ ಕಾರ್ಯಕ್ರಮ ಆಯೋಜಿಸಿದ್ದು ಕಾದಂಬರಿ, ನಾಟಕ, ಪ್ರಬಂಧ, ಚೌಪದಿ, ಕವನ ಸಂಕಲನ ಹೀಗೆ ಎಲ್ಲಾ ಪ್ರಕಾರದ 21 ಸಾಹಿತ್ಯ ಕೃತಿಗಳನ್ನು ಹೊರತಂದು ಉತ್ತಮ ನಿರೂಪಕರಾಗಿ, ಉಪನ್ಯಾಸಕರಾಗಿ, ಶಿಕ್ಷಕರಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಕ್ರಿಯಾಶೀಲರಾಗಿರುವ ಸಂದೀಪ ಭಟ್ಟ ಸೇರಿದಂತೆ ರಾಜ್ಯದ ನಾಲ್ಕು ಜನ ಗೌರವಕ್ಕೆ ಪಾತ್ರರಾಗಲಿದ್ದಾರೆ.

RELATED ARTICLES  ಬಾಡ ದೇವಾಲಯಕ್ಕೆ ಹೊಸ ಆಡಳಿತ ಕಮೀಟಿ.

ತಮ್ಮ ಸರಳತೆ ಹಾಗೂ ಪ್ರಭಾವಶಾಲಿ ಮಾತುಗಳಿಂದ ಅತ್ಯುತ್ತಮ ಉಪನ್ಯಾಸಕರ ಸಾಲಿನಲ್ಲಿ‌ ಸೇರಿರುವ ಇವರು ಕಾರ್ಯಕ್ರಮದ ನಿರೂಪಕರಾಗಿಯೂ ಗುರ್ತಿಸಿಕೊಂಡವರು. ಕ್ರಿಯಾಶೀಲ ವ್ಯಕ್ತಿತ್ವದಿಂದ ಮನೆ ಮಾತಾಗಿರುವ ಇವರಿಗೆ ಇದೀಗ ಈ ಗೌರವ ದಕ್ಕಿರುವುದಕ್ಕೆ ಅವರ ಆತ್ಮೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES  ಶಿರಸಿಯಲ್ಲಿ ಶಂಕರ ಜಯಂತಿ ಸಂಪನ್ನ: ಹಂಪಿಹೊಳಿಯವರಿಗೆ ಸಂದಿತು ಆಚಾರ್ಯ ಶಂಕರ ಪ್ರಶಸ್ತಿ.

ಈಗಾಗಲೇ ರಾಜ್ಯಮಟ್ಟದಲ್ಲಿ ಆಶುಭಾಷಣ, ಪ್ರಬಂಧ, ಭಜಗೋವಿಂದಂ, ಹೀಗೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಸಂದೀಪ ಭಟ್ಟರ ಕೀರ್ತಿಕಿರೀಟಕ್ಕೆ ಇದು ಮತ್ತೊಂದು ಗರಿ ಎಂದರೆ ಅತಿಶಯೋಕ್ತಿಯಲ್ಲ.