ಕುಮಟಾ : ತಾಲೂಕಿನ ಕಡ್ಲೆ ಗ್ರಾಮದ ಸಮುದ್ರ ತೀರದಲ್ಲಿ ವೆಂಕಟ್ರಮಣ ಆಚಾರಿ ಕೈಚಳಕದಲ್ಲಿ ಸ್ನೇಹಿತರಾದ ಅರುಣ ಆಚಾರಿ,ಗಣೇಶ ಆಚಾರಿ, ವಿನಾಯಕ ಆಚಾರಿ, ಶ್ರೀನಿವಾಸ ಆಚಾರಿ ಇವರು ಊರ ನಾಗರಿಕರ ಸಹಕಾರದೊಂದಿಗೆ ಭಾರೀ ಎತ್ತರದ ಮರಳಿನ ಶಿವನ ಮೂರ್ತಿಯನ್ನ ನಿರ್ಮಿಸುವ ಮೂಲಕ ಎಲ್ಲರ ಗಮನಸೆಳೆಯುವಂತೆ ಮಾಡಿಹದ್ದಾರೆ.
ಕಡ್ಲೆ ಸಮುದ್ರ ತೀರದಲ್ಲಿ ಮರಳಿನಿಂದ ಶಿವಮೂರ್ತಿ ನಿರ್ಮಿಸಲಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಕಡ್ಲೆ ಗ್ರಾಮದಿಂದ ಅಷ್ಟೆ ಅಲ್ಲದೆ ಕುಮಟ ಸುತ್ತಮುತ್ತಲಿನಿಂದ ಭಾರೀ ಸಂಖ್ಯೆಯಲ್ಲಿ ಶಿವ ಭಕ್ತರು ಆಗಮಿಸಿ ಮರಳಿನ ಶಿವ ಮೂರ್ತಿಗೆ ಪೂಜೆ ಸಲ್ಲಿಸಿ ಪುನಿತರಾಗುತ್ತಿದ್ದಾರೆ.