ಕುಮಟಾ: ತಾಲೂಕಿನ ಪಿ ಎಲ್ ಡಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ಸದಸ್ಯರಾದ ಶ್ರೀ ವಿ ಟಿ ನಾಯ್ಕ ಬಾಡ ಇಂದು ದೈವಾದೀನರಾದರು.
ದಿ. ಶ್ರೀ ವಿ ಟಿ ನಾಯ್ಕ ಇವರುಕುಮಟಾ ಪಿ ಎಲ್ ಡಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷರಾಗಿ ಉತ್ತಮ ಸೇವೆಸಲ್ಲಿಸಿದ್ದರು. ಹಾಗೂ ಹಾಲಿ ಸದಸ್ಯರಾಗಿಯೂ ಅನೇಕ ವರ್ಷದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು.
ಇವರು ಪತ್ನಿ,ಮಕ್ಕಳು,ಅಳಿಯ,ಸೊಸೆಯಂದಿರು, ಮೊಮ್ಮಕ್ಕಳೂ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇವರ ಅಕಾಲಿಕ ನಿಧನ ಕುಟುಂಬಸ್ಥರಿಗೆ ನೋವು ಉಂಟು ಮಾಡಿದೆ ಮ್ರತರ ನಿಧನಕ್ಕೆ ಅವರ ಆಪ್ತರು ಹಾಗೂ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.
ಇವರ ಅಂತ್ಯ ಕ್ರಿಯೆಯನ್ನು ಇಂದು ಸಾಯಂಕಾಲ ಬಾಡ ಹುಬ್ಬಣಗೇರಿಯಲ್ಲಿನೆರವೇರಿಸಲಾಗುವುದು.