ಕುಮಟಾ : ಹೆಗಡೆಯ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕರು ಭೇಟಿ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆದ ವಿದ್ಯಾರ್ಥಿಯನ್ನು ಅಭಿನಂದಿಸಿದರು..


ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಡ್ಯದಲ್ಲಿ ನಡೆದ 2019-20 ನೇ ಸಾಲಿನ ರಾಜ್ಯಮಟ್ಟದ ಇನ್ಪ್ಸೈರ್ ಅವಾರ್ಡ್ ವಿಜ್ಞಾನ ಮತ್ತು ಪ್ರದರ್ಶನ ದಲ್ಲಿ ಹೆಗಡೆ ಹೆಣ್ಣು ಮಕ್ಕಳ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ ರೇವತಿ ಮಾಸ್ತಿ ಮುಕ್ರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರೋ ವಿಷಯ ತಿಳಿದ ಶಾಸಕ ದಿನಕರ ಶೆಟ್ಟಿ ಸ್ವ ಇಚ್ಛೆ ಇಂದ ವಿದ್ಯಾರ್ಥಿನಿಯ ಸಾಧನೆ ತಿಳಿದು ಅಭಿನಂದಿಸುವ ಉದ್ದೇಶದಿಂದ ಶಾಲೆಗೆ ಶನಿವಾರ ಭೇಟಿ ನೀಡಿ ಅವಳು ಮಾಡಿರುವ ಮಿನಿ ಟ್ರ್ಯಾಕ್ಟರ್ ಬಗ್ಗೆ ಅವಳಿಂದ ಲೇ ವಿಷಯ ತಿಳಿದ ಶಾಸಕರು ಅವಳ ಅಲ್ಪನೆಗೆ ಆಶ್ಚರ್ಯ ವ್ಯಕ್ತಪಡಿಸಿ ಮೂಕ ವಿಸ್ಮಿತರಾದರು..


ನಂತರ ತುಂಬು ಮನಸಿನಿಂದ ಅವಳನ್ನು ಅಭಿನಂದಿಸಿ ಗೌರವಿಸಿ ಅವಳ ಬೆನ್ನು ತಟ್ಟಿ ಮಾತನಾಡುತ್ತ ರಾಷ್ಟ್ರ ಮಟ್ಟದಲ್ಲಿಯೂ ನಿನ್ನ ಈ ಸಾಧನೆ ಎಲ್ಲರನ್ನೂ ಬೆರಗುಗೊಳಿಸಲಿ ಎಂದುಕೊಂಡು ಹಾರೈಸಿದರು.. ಮಾತು ಮುಂದುವರೆಸಿದ ಶಾಸಕರು ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಹಾಗೂ ಛಲ ಮೊದಲು ಇರಬೇಕು. ನಾವು ಏನಾದರೂ ಸಾಧನೆ ಮಾಡಿ ಶಾಲೆಗೆ. ಊರಿಗೆ.. ಪಾಲಕರಿಗೆ ಒಳ್ಳೆಯ ಕೀರ್ತಿ ತರಬೇಕು ಅನ್ನುವ ಮನೋಭಾವನೆ ಬೆಳೆಸಿಕೊಳ್ಳಬೇಕು.. ಇವಳ ಕಲ್ಪನೆ ತುಂಬಾ ಎತ್ತರದಲ್ಲಿದೆ.. ರೈತರಿಗೆ ಕಡಿಮೆ ದರದಲ್ಲಿ ಹೊಲ ಊಳುವ ಟ್ರ್ಯಾಕ್ಟರ್ ಇವಳು ಶಿಕ್ಷಕ ಶ್ರೀಧರ ಗೌಡ ಹಾಗೂ ಪಾಲಕ ಮಾಸ್ತಿ ಮುಕ್ರಿ ಯವರ ಪೊತ್ಸಾಹ ಮಾರ್ಗದರ್ಶನ ದಲ್ಲಿ ಮಾಡಿದ್ದಾಳೆ ತುಂಬಾ ಸಂತಸ ದ ವಿಷಯ… ಹೆಗಡೆ ಯ ಯುವಕರು ವಿದ್ಯಾರ್ಥಿಗಳು ಏನಾದರೂ ಒಂದು ಸಾಧನೆ ಮಾಡಿ ಹೆಸರು ಮಾಡುತ್ತ ಬಂದವರು.. ಎಂದು ಹೆಗಡೆ ಬಗ್ಗೆ ತಮ್ಮ ಅಭಿಮಾನ ವ್ಯಕ್ತಪಡಿಸಿದರು.. ಎಲ್ಲ ಮಕ್ಕಳಿಗೂ ಸಿಹಿ ವಿತರಿಸಿ ಶಿಕ್ಷಕರನ್ನೂ.. ಎಸ್ ಡಿ ಎಂ ಸಿ ಹಾಗೂ ಊರ ನಾಗರಿಕರನ್ನು ಅಭಿನಂದಿಸಿದರು
ಶಿಕ್ಷಕ ಶ್ರೀಧರ ಗೌಡ ಉಪ್ಪಿನಗಣಪತಿ ಮಾತನಾಡಿ ಶಾಸಕರು ನಮ್ಮ ವಾರ್ಷಿಕ ಸ್ನೇಹ ಸಮ್ಮೇಳನ ಕ್ಕೆ ಇರದ ಕಾರಣ ಅವರು ಬಂದಿರಲಿಲ್ಲ ಆದರೆ ಈ ವಿದ್ಯಾರ್ಥಿ ಮಾಡಿದ ಸಾಧನೆ ತಿಳಿದು ನನಗೆ ಅವರೇ ದೂರವಾಣಿ ಮುಖಾಂತರ ನಾನು ಬಂದು ವಿದ್ಯಾರ್ಥಿನಿಗೆ ಅಭಿನಂದಿಸುವುದಾಗಿ ತಿಳಿಸಿದರು.. ಇಂತಹ ಉತ್ತಮ ಸೂಕ್ಷ್ಮ ಸಂವೇದನೆ ಇರುವ ಶಾಸಕರು ನಮಗೆ ಸಿಕ್ಕಿರುವುದು ಹೆಮ್ಮೆ.. ಈತರ ಜನರ ಜೊತೆ ಬೆರೆಯುವ ಅವರ ವ್ಯಕ್ತಿತ್ವವೇ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದ..
ಶಾಸಕರು ಈಗಾಗಲೇ ಸುಮಾರು 5 ಲಕ್ಷ 17 ಸಾವಿರ ರೂಪಾಯಿ ಶಾಲೆಯ ವಿವಿಧ ಅಭಿವೃದ್ಧಿ ಕೆಲಸಕ್ಕೆ ಕೊಟ್ಟಿದ್ದಾರೆ… ಎಂದು ತಿಳಿಸಿದರು.

RELATED ARTICLES  ಐಕ್ಯ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ


ಕಾರ್ಯಕ್ರಮದಲ್ಲಿ ರೇವತಿ ಮುಕ್ರಿ ತಂದೆ ಮಾಸ್ತಿ ಮುಕ್ರಿ, ಸಿ ಆರ್ ಪಿ ನರಹರಿ ಭಟ್ಟ, ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್ ನಾಯ್ಕ, ಸಿರಿ ನಾಯ್ಕ, ಪ್ರಕಾಶ ನಾಯ್ಕ, ವಿನಾಯಕ ಶೇಟ್, ರಾಧಾ ನಾಯ್ಕ ಹಾಗೂ ಇತರ ಸದಸ್ಯರು, ಪ್ರಭಾರ ಮುಖ್ಯಾಧ್ಯಾಪಕಿ ಮಂಗಲಾ ಹೆಬ್ಬಾರ್, ಶಿಕ್ಷಕರಾದ ಶ್ಯಾಮಲಾ ಪಟಗಾರ, ನಾಗರಾಜ್ ಶೆಟ್ಟಿ, ವಿವೇಕ, ಸುಬ್ಬು ಅಂಬಿಗ , ಸಿರಿ ಪಟಗಾರ ಉಪಸ್ಥಿತರಿದ್ದರು

RELATED ARTICLES  ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಕುಮಟಾ ವಿಭಾಗದಿಂದ ಕಾರ್ಯಕ್ರಮ