ಕುಮಟಾ: ಶಿಕ್ಷಣ ಇಲಾಕೆಯವರು ಡಯಟ್ ಕುಮಟಾದಲಿ ಸಂಘಟಿಸಿದ್ದ ಜಿಲ್ಲಾಮಟ್ಟದ Best Practicing School ಕಾರ್ಯಾಗಾರದಲ್ಲಿ ಕುಮಟಾ ತಾಲೂಕಿನ ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ಕನ್ನಡ ಜಿಲ್ಲೆಯ “ಉತ್ತಮ ಪ್ರಾಯೋಗಿಕ ಶಾಲೆ “ಯಾಗಿ ಹೊರಹೊಮ್ಮಿದೆ.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈ ಸ್ಪರ್ಧೆಯನ್ನು ನಡೆಸಿ ತಾಲೂಕಾ ಮಟ್ಟದಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದ ಶಾಲೆಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಕುಮಟಾ ತಾಲೂಕಿನ ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕಾ ಮಟ್ಟದಲ್ಲಿ ಆಯ್ಕೆಯಾಗಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.

RELATED ARTICLES  ಅಕ್ರಮ ಗೋ ಸಾಗಾಟ : ಗೋ ರಕ್ಷಣಾ ವೇದಿಕೆಯಿಂದ ರಕ್ಷಣೆ

ಕಾರ್ಯಾಗಾರದಲ್ಲಿ ಶಾಲೆಯ ಕಲಿಕಾ ವಾತಾವರಣ, ಲಭ್ಯವಿರುವ ಮೂಲಭೂತ ಸೌಕರ್ಯಗಳು, ಸಮುದಾಯದ ಸಹಕಾರದಿಂದ ಕೈಗೊಂಡ ಕಾರ್ಯಗಳು, ಶಾಲೆಯ ನಾವಿನ್ಯಯುತ ಚಟುವಟಿಕೆಗಳು, ತರಗತಿ ಕೊಠಡಿಯಲ್ಲಿ ತಂತ್ರಜ್ಞಾನದ ಬಳಕೆ, ಇಲಾಖಾ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಮುಂತಾದ ಅಂಶಗಳನ್ನು ಮಾನದಂಡವಾಗಿ ಪರಿಗಣಿಸಿ ಪರಿಶೀಲಿಸಲಾಯಿತು. ಈ ಎಲ್ಲಾ ಅಂಶಗಳಲ್ಲೂ ಗಮನಾರ್ಹ ಸಾಧನೆ ಮಾಡಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆಯನ್ನು ಜಿಲ್ಲೆಯ ಉತ್ತಮ ಪ್ರಾಯೋಗಿಕ ಶಾಲೆ ಎಂದು ಘೋಷಿಸಲಾಯಿತು. ಶಿಕ್ಷಕ ರವೀಂದ್ರ ಭಟ್ಟ ಸೂರಿ ತಮ್ಮ ಶಾಲಾ ಸಾಧನೆಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮಂಡಿಸಿ ನಿರ್ಣಾಯಕರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದ್ದರು.

RELATED ARTICLES  ಕುಮಟಾ ಬ್ಲಾಕ್‌ ಕಾಂಗ್ರೆಸ್ ಕಛೇರಿಯಲ್ಲಿ ಡಾ! ಬಿ ಆರ್ ಅಂಬೇಡ್ಕರ್ ರವರ 127 ನೇ ಜಯಂತಿ ಆಚರಣೆ.

ಈ ಸಾಧನೆಗೆ ಕಾರಣವಾದ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದಕ್ಕೆ ಮತ್ತು ಎಸ್.ಡಿ.ಎಂ.ಸಿ ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.