ಯಲ್ಲಾಪುರ: ಎಷ್ಟೋ ವನಸ್ಪತಿ ಸಸ್ಯಗಳು ನಕ್ಷತ್ರ, ಮಾಸ, ತಿಥಿಗಳಿಗೆ ಸಂಬಂದಪಟ್ಟು ಆಯಾ ಕಾಲದಲ್ಲಿ ಅವುಗಳು ವಿಶಿಷ್ಠವಾಗಿ ಉಪಯೋಗಕ್ಕೆ ಬರುತ್ತದೆ. ಮನುಷ್ಯನ ಆರೋಗ್ಯವನ್ನು ಸುಧಾರಿಸುವಲ್ಲಿ ಈ ವನಸ್ಪತಿಗಳು ಉಪಯುಕ್ತವಾದಂತೆ ಧಾರ್ಮಿಕ ಕ್ಷೇತ್ರದಲ್ಲಿಯೂ ಸಸ್ಯಗಳ ಬಳಕೆ ಪ್ರಾಚೀನ ಕಾಲದಿಂದಲೂ ಬಂದಿದೆ. ಪ್ರತಿ ಊರಿನಲ್ಲಿ ನಕ್ಷತ್ರವನ, ಔಷಧಿಸಸ್ಯವನ, ಅಥವಾ ನವಗ್ರಹವನ, ಉಪವನ, ಮಾಡುವುದರ ಮೂಲಕ ಸಸ್ಯಗಳ ಪಾವಿತ್ರ್ಯತೆ ಶ್ರೇಷ್ಠತೆಯನ್ನು ತಿಳಿದುಕೊಳ್ಳಬೇಕು ಎಂದು ಯೂಥ್ ಪಾರ್ ಸೇವಾ ಸಂಸ್ಥೆಯ ಪ್ರಾಂತ ಪರಿಸರ ಸಂಯೋಜಕ ಉಮಾಪತಿ ಕೆ.ವಿ.ಶಿರಸಿ ಅಭಿಪ್ರಾಯಪಟ್ಟರು.
ಯೂಥ್ ಪಾರ್ ಸೇವಾ ಸಂಸ್ಥೆ ಮತ್ತು ಸುದರ್ಶನ ಸೇವಾ ಟ್ರಸ್ಟ ಆಶ್ರಯದಲ್ಲಿ ಆನಗೋಡಿನ ಮಾನಿಗದ್ದೆಯಲ್ಲಿ ನವಗ್ರಹ ವನದ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಋಷಿ-ಮುನಿಗಳ ಕಾಲದಿಂದ ಎಷ್ಟೋ ಸಸ್ಯಗಳನ್ನು ಹಳ್ಳಿಯಲ್ಲಿ ಔಷಧಿಯಾಗಿ ಬಳಸುತ್ತಿದ್ದಾರೆ. ಕೆಲವಷ್ಟು ನಶಿಸಿಹೋಗುತ್ತಿದ್ದು ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಾಗಬೇಕು. ದೇಶದಲ್ಲಿ ಸಮರ್ಥ ಭಾರತ ಕೋಟಿ ವೃಕ್ಷ ಯೋಜನೆ ಅಳಿಯುತ್ತಿರುವ ಸಸ್ಯಸಂಕುಲವನ್ನು ಬೆಳೆಸುವ ಉದ್ಧೇಶ ಮತ್ತು ಸಸ್ಯ ಸಂಪತ್ತನ್ನು ಹೆಚ್ಚಿಸುವ ಯೋಜನೆಯಾಗಿ ರೂಪುಗೊಂಡಿದೆ. ಪ್ರತಿಯೊಬ್ಬರೂ ನಮ್ಮ ಸಸ್ಯ ಸಂಪತ್ತಿನ ಮಹತ್ವ ತಿಳಿದುಕೊಂಡು ಅದರ ಉಪಯೋಗದ ಜೊತೆಗೆ ಸಂರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದ ಹೇಳಿದರು.
ಗಣಪತಿ ಗಾಂವ್ಕಾರ್ ವಡಗಿರಿಪಾಲ್, ಸುದರ್ಶನ ಸೇವಾ ಟ್ರಸ್ಟ ಮುಖ್ಯಸ್ಥ ಗಣಪತಿ ಮಾನಿಗದ್ದೆ, ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ನರಸಿಂಹ ಸಾತೊಡ್ಡಿ, ಸತ್ಯನಾರಾಯಣ ನೆರ್ಲೆಮನೆ, ನಾಗೇಂದ್ರ ಭಟ್ಟ, ದಾಮೋದರ ದೇವಸುಪಾಲ್, ಕಮಲಾಕ್ಷಿ ಗಾಂವ್ಕಾರ್, ಅಶೋಕ ಮರಾಠಿ, ಮಣಿಕಂಠ ಪಟಗಾರ್, ಸುಬ್ರಹ್ಮಣ್ಯ ಮಾನಿಗದ್ದೆ, ಸಹನಾ ಗಾಂವ್ಕಾರ್, ನಾರಾಯಣ ದೇವಸಪಾಲ್ ಉಪಸ್ಥಿತರಿದ್ದರು.

RELATED ARTICLES  ದಿನಾಂಕ 20 ರಂದು ಕುಮಟಾದಲ್ಲಿ ಕೊಂಕಣಿ ಮಾನ್ಯತಾ ದಿವಸ ಆಚರಣೆ