ಕುಮಟಾ: ಪಟ್ಟಣದ ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಉದ್ಯೋಗಿಯೋರ್ವಳು ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಫೆ.20 ರಂದು ಬೆಳಿಗ್ಗೆ 10.30 ಘಂಟೆಗೆ ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವಳು ಇನ್ನುವರೆಗೂ ವಾಪಸ್ ಮನೆಗೆ ಬಂದಿಲ್ಲ. ಹಾಗಾಗಿ ನನ್ನ ಮಗಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ಶ್ರೀಧರ ಶಾನಭಾಗ ಅವರು ಫೆ. 21 ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಕಾರವಾರದ ಬಿಣಗಾದಲ್ಲಿ ಯುವತಿ ಇರುವುದನ್ನು ಖಚಿತ ಪಡಿಸಿದ ಕುಮಟಾ ಪೊಲೀಸರು ಯುವತಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ ಸಿಕ್ಕಿದ್ದು
ಆಕೆ ತನ್ನ ಪ್ರಿಯಕರನ ಜೊತೆ ವಿವಾಹವಾಗುವ ಮೂಲಕ ಪಾಲಕರಿಗೆ ಶಾಕ್ ನೀಡಿದ್ದಾಳೆ.
ಪಟ್ಟಣದ ಹೊನ್ಮಾವ್ ನಿವಾಸಿ ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಉದ್ಯೋಗಿ ಸೀತಾ ಶ್ರೀಧರ ಶಾನಭಾಗ ಈ ನಾಪತ್ತೆ ಆದ ಮಹಿಳೆಯಾಗಿದ್ದಳು.
ಸೀತಾ ಶಾನಭಾಗ ಮತ್ತು ಧನುಷ್ ನಾಯ್ಕ ಪರಸ್ಪರ ಕಳೆದ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂದು ಪಾಲಕರಿಗೆ ಮೊದಲೇ ವಿಷಯ ತಿಳಿದಿತ್ತು ಎನ್ನಲಾಗಿದೆ. ಅನ್ಯಜಾತಿಯ ಯುವಕನಾಗಿರುವುದರಿಂದ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸದ ಕಾರಣ ನಾಪತ್ತೆಯಾಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎಂಬ ವಿಷಯ ತಿಳಿದುಬಂದಿದೆ.