ದಿನಾಂಕ : 20-02-2020 ರಿಂದ 26-02-2020 ರ ವರೆಗೆ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.

ಆರೋಗ್ಯ ತಪಾಸಕರಾಗಿ ಆಗಮಿಸಿದ್ದ ಡಾ|| ವಿನಯಕುಮಾರ ಹೆಗಡೆ ಇವರನ್ನು ಶ್ರೀ ಭಾರತೀ ಆಂಗ್ಲ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉಮೇಶ ವಿ ಹೆಗಡೆ ಅಭ್ಳಿ ಇವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶ್ರೀ ಉಮೇಶ ವಿ ಹೆಗಡೆ ಅಭ್ಳಿ ಇವರು ಮಾತನಾಡಿ ಡಾ|| ವಿನಯಕುಮಾರ ಹೆಗಡೆ ಇವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ತಮ್ಮ ಕಠಿಣ ಪರಿಶ್ರಮ, ಆಸಕ್ತಿ, ನಿರಂತರ ಅಭ್ಯಾಸದಿಂದ ತಮ್ಮ ವೈದ್ಯಕೀಯ ವೃತ್ತಿಯನ್ನು ಸಂಪೂರ್ಣ ಮೆರಿಟ್ ನಿಂದ ಪೂರೈಸಿರುತ್ತಾರೆ. ಅವರ ಯಶಸ್ಸಿಗೆ ಅವರ ಈ ನಿರಂತರ ಅಭ್ಯಾಸವೇ ಕಾರಣ ಎಂದರು. ವಿದ್ಯಾರ್ಥಿಗಳು ಅವರಿಂದ ಸ್ಪೂರ್ತಿ ಪಡೆದು ಜೀವನದಲ್ಲಿ ಯಶಸ್ಸನ್ನು ಪಡೆಯಲು ಪ್ರಯತ್ನಿಸಬೇಕು, ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದರು. ಸಹ ಶಿಕ್ಷಕಿಯಾದ ಶ್ರೀಮತಿ ಮಾನಸಾ ಹೆಗಡೆ ಸ್ವಾಗತಿಸಿದರು.

RELATED ARTICLES  ಅರಬೈಲ್ ಘಟ್ಟದಲ್ಲಿ ಎರಡು ಲಾರಿಗಳ ಮಧ್ಯೆ ಅಪಘಾತ

ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕಿಯಾದ ಶ್ರೀಮತಿ ವೈಲೆಟ್ ಕೆ ಫರ್ನಾಂಡೀಸ್ ರವರು ವಂದಿಸಿದರು.