ಕಾರವಾರ: ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ ಗ್ರಂಥಾಲಯಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿಯನ್ನು ಆಯಾ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಮಾ.20 ರೊಳಗೆ ಸಲ್ಲಿಸಬೇಕು.

RELATED ARTICLES  ಗ್ರಹಣ ವಿಚಾರ : ಸ್ವರ್ಣವಲ್ಲೀ ಮಠದಿಂದ ಮರು ಪ್ರಕಟಣೆ.

ತಿಂಗಳಿಗೆ ರೂ. 7000 ಗೌರವಸಂಭಾವನೆ ಆಧಾರದ ಮೇಲೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೇಲ್ವೆಚಾರಕ ಹುದ್ದೆಯು ಮೀಸಲಾತಿಗೆ ಒಳಪಟ್ಟಿರುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಎಸ್.ಎಸ್.ಎಲ್.ಸಿ. ಉತ್ತೀರ್ಣವಾಗಿರಬೇಕು ಹಾಗೂ ಸ್ಥಳೀಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಅಭ್ಯರ್ಥಿಯಾಗಿರಬೇಕು. ಗ್ರಂಥಾಲಯ ವಿಜ್ಞಾನದ ತರಬೇತಿ ಹೊಂದಿದವರಿಗೆ ಆದ್ಯತೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಕುಮಟಾದಲ್ಲಿ ಪ್ರಸ್ತುತ ಹವ್ಯಾಸಿ ರಂಗಭೂಮಿ : ಸಂವಾದ