ಕುಮಟಾ : ಶ್ರೀ ರಾಮಚಂದ್ರಾಪುರ ಮಠ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ಮಂಗಳೂರಿನ ಪ್ರತಿಷ್ಠಿತ ಕೆ.ಎಸ್ ಹೆಗಡೆ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ “ಉಚಿತ ಆರೋಗ್ಯ ತಪಾಸಣಾ ಶಿಬಿರ” ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ದಿನಾಂಕ 29/02/2020 ಶನಿವಾರ ಮಧ್ಯಾಹ್ನ 2.00 ರಿಂದ ಸಂಜೆ 5.00 ರ ವರೆಗೆ ನಡೆಯಲಿದೆ. ಈ ಬಗ್ಗೆ ಇಂದು ಕುಮಟಾದ ಖಾಸಗಿ ಹೊಟೆಲ್ ನಲ್ಲಿ ಪ್ರಮುಖರು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು.

ಸಾಮಾನ್ಯ ವೈದ್ಯಕೀಯ, ಚರ್ಮರೋಗ, ಎಲುಬು ಮತ್ತು ಕೀಲು ರೋಗ, ಮಕ್ಕಳ ವಿಭಾಗ, ಶಸ್ತ್ರಚಿಕಿತ್ಸೆ ಸಂಬಂಧಿ ಖಾಯಿಲೆ ಹಾಗೂ ದಂತ ಖಾಯಿಲೆಗಳಿಗೆ ಅದರಲ್ಲಿಯೂ ವಿಶೇಷವಾಗಿ ಮಂಡಿ ಬದಲಾವಣೆ ಶಸ್ತ್ರ ಚಿಕಿತ್ಸೆ, ಸ್ಪೋರ್ಟ್ಸ್ ಇಂಜೂರಿಸ್ ಗಳಿಗೆ ಸಂಬಂಧಿಸಿ ನುರಿತ ವೈದ್ಯರು ಆಗಮಿಸಲಿದ್ದಾರೆ.

RELATED ARTICLES  ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಪ್ರಾಚಾರ್ಯೆ ಎಂದು ಹೇಳಲು ಅಭಿಮಾನ ಎನಿಸುತ್ತದೆ : ಡಾ. ಸುಲೋಚನಾ ರಾವ್ ಬಿ.

ಡಾ. ಸಿದ್ದಾರ್ಥ ಶೆಟ್ಟಿ ( ಆರ್ಥೋಸ್ಕೋಪಿ ತಜ್ಞರು) , ಡಾ. ಪ್ರತೀಕ್ಷ ರೈ( ಫಿಸಿಶಿಯನ್ ಹಾಗೂ ಮೆಡಿಸಿನ್ ತಜ್ಞರು) , ಡಾ. ಸಚ್ಚಿದಾನಂದ ಮಲ್ಯ (ದಂತ ವೈದ್ಯಕೀಯ ತಜ್ಞರು) , ಡಾ. ಶ್ರೀಚರಿತ್ ಶೆಟ್ಟಿ (ಚರ್ಮರೋಗ ತಜ್ಞರು), ಡಾ.ಪ್ರವೀಣ್ ನಾಯಕ್ (ಮಕ್ಕಳ ತಜ್ಞರು), ಡಾ. ಕಾರ್ತಿಕ್ ಐತಾಳ್ (ಶಸ್ತ್ರಚಿಕಿತ್ಸೆ ತಜ್ಞರು) ಶಿಬಿರದಲ್ಲಿ ಲಭ್ಯರಾಗಲಿದ್ದಾರೆ.

ಶಿಬಿರದಲ್ಲಿ ಕ್ಷೇಮ ಹೆಲ್ತ್ ಕಾರ್ಡ ನೋಂದಣಿ ಮಾಡಲಾಗುವುದು ಎಂದು ತಿಳಿಸಲಾಗಿದೆ‌. ಅದೇ ರೀತಿ ಆಯುಷ್ಮಾನ್ ಭಾರತ,ಸಂಪೂರ್ಣ ಸುರಕ್ಷಾ,ಇ.ಎಸ್.ಐ ಹಾಗೂ ಇತರ ಖಾಸಗಿ ವಿಮೆಗಳಿಗೆ ನಗದು ರಹಿತ ಸೌಲಭ್ಯವೂ ಇದ್ದು ಸಂಬಂಧಿಸಿದ ದಾಖಲೆಗಳನ್ನು ತರಬಹುದೆಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮಂಜುನಾಥ ಭಟ್ಟ 9448434988, ಸತೀಶ್ ಭಟ್ಟ 9448318664, ವಿಶ್ವನಾಥ ಪಂಡಿತ 9448007828 ಇವರನ್ನು ಸಂಪರ್ಕಿಸಬಹುದು.

RELATED ARTICLES  What Is The Current Ratio Formula & Calculation?

ಶಿಬಿರ ಸಂಪೂರ್ಣವಾಗಿ ಉಚಿತವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಸಂಘಟಕರು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಕೊಂಕಣ ಎಜ್ಯುಕೇಶನ್ ಕಾರ್ಯದರ್ಶಿ ಮುರಳೀಧರ ಪ್ರಭು, ಶ್ರೀ ರಾಮಚಂದ್ರಾಪುರ ಮಠದ ಸಂಘಟನಾ ಖಂಡದ ಶ್ರೀ ಸಂಯೋಜಕ ಮಂಜುನಾಥ ಭಟ್ಟ ಸುವರ್ಣಗದ್ದೆ. ಪ್ರಮುಖರಾದ ಡಾ. ಸುರೇಶ್ ಹೆಗಡೆ, ಸತೀಶ್ ಭಟ್ಟ, ಎನ್‌. ಆರ್ ಮುಕ್ರಿ, ಕೆ.ಎನ್ ಹೆಗಡೆ, ಅರುಣ ಮಣಕಿಕರ, ವಿನಾಯಕ ಹೆಗಡೆಕಟ್ಟೆ ಹಾಗೂ ಇನ್ನಿತರರು ಇದ್ದರು.