ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಯುವ ಸಾಹಿತಿ ವಿ. ಸಂದೀಪ ಭಟ್ಟ ಹೊಸಾಕುಳಿ ಇವರಿಗೆ ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆ ಮತ್ತು ಆದಿಗುರು ಶಂಕರ ಸಾಹಿತ್ಯ ಪರಿಷತ್ತು ಸಾಹಿತ್ಯ ಸೇವಾ ದುರಂಧರ ಬಿರುದು ನೀಡಿ ರಾಜ್ಯಮಟ್ಟದ ಸಮಾಜ ಸೇವಾ ಭಾರ್ಗವ ಪ್ರಶಸ್ತಿ ಇತ್ತು ಗೌರವಿಸಿದೆ.


ಫೆಬ್ರುವರಿ 23 ರಂದು ಹೊಸಪೇಟೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಇದನ್ನು ಪ್ರದಾನ ಮಾಡಲಾಯಿತು. ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಕಲ್ಲಂ ಭಟ್ ( ನೋಟರಿ ವಕೀಲರು, ಹೊಸಪೇಟೆ ) ಇವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಸಂದೀಪ ಭಟ್ಟ ಅಲ್ಲದೇ ಡಾ|| ವೆಂಕಟೇಶ ನವಲಿ, (ರಾಯಚೂರು), ಡಾ|| ಅರುಣಾ ಹಿರೇಮಠ (ರಾಯಚೂರು) ಇವರು ಕೂಡ ಪ್ರಶಸ್ತಿಗೆ ಭಾಜನರಾದರು. ಶ್ರೀಯುತ ಕೆ.ದಿವಾಕರ್ ಅವರು ಅಧ್ಯಕ್ಷತೆ ವಹಿಸಿದ್ದು, ಪ್ರೊ|| ಯು ರಾಘವೇಂದ್ರ ರಾವ್, ಶ್ರೀಯುತ ವಿಷ್ಣುತೀರ್ಥ ಕಲ್ಲೂರಕರ್, ಶ್ರೀ ಎಚ್.ಪಿ ಶಿವಕುಮಾರ್, ಶ್ರೀ ಎಚ್.ಪಿ ವಿಶ್ವನಾಥ, ಶ್ರೀ ಎಚ್.ಪಿ ಶಿವಶಂಕರ ಭಟ್ಟ, ಡಾ|| ಶ್ರೀನಿವಾಸ ದೇಶಪಾಂಡೆ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅತ್ಯಂತ ಸುವ್ಯವಸ್ಥಿತವಾಗಿ ಸುಸಂಪನ್ನಗೊಂಡಿತು.

RELATED ARTICLES  ಮಾ.21 ಕ್ಕೆ ಉಚಿತ ಗ್ರಾಮೀಣ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ


ಹೊಸಪೇಟೆಯ ಪ್ರಸಿದ್ಧ ಗಾಯಕರು ಚಲನಚಿತ್ರದ ಹಳೆಯ ಗೀತೆಗಳನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು. ಭರತನಾಟ್ಯ, ಚಿತ್ರಕಲೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜಯನಗರದ ಸಾಂಸ್ಕೃತಿಕ ಪರಂಪರೆಯನ್ನು ಮತ್ತೆ ನೆನಪಿಸಿದವು.

RELATED ARTICLES  ಕ್ವಾರಂಟೈನ್ ಅಲ್ಲಿ ಇರುವವರೊಂದಿಗೆ " ವಿಡಿಯೋ ಸಂವಾದ " ನಡೆಸಿದ ಹೆಬ್ಬಾರ್.


ಶ್ರೀಯುತ ಸಂದೀಪ ಭಟ್ಟ ಮಾತನಾಡಿ ಹೊಸಾಕುಳಿಯಿಂದ ಹೊಸಪೇಟೆಗೆ ಬಂದು ಪ್ರಶಸ್ತಿ ಸ್ವೀಕರಿಸುವದಕ್ಕಿಂತ ವಿಜಯನಗರದ ಜನರ ಪ್ರೀತಿ ನನ್ನನ್ನು ಇಲ್ಲಿಗೆ ಸೆಳೆಯಿತು ಎಂದು ಕೃತಜ್ಞತೆ ಸಲ್ಲಿಸಿದರು. ಬದುಕಿನಲ್ಲಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿಹೋಗಬೇಕು 3 ರೂಪಾಯಿಯ ಪೆನ್ಸಿಲ್ ಕೂಡ ತನ್ನ ಜೀವನದಲ್ಲಿ 32 ಕಿ.ಮೀ ನಷ್ಟು ನಡೆಯುವುದಾದರೆ ನಮ್ಮ ಉತ್ಸಾಹ ಅದೆಷ್ಟೋ ಕೆಲಸವನ್ನು ಮಾಡಿಸೀತು. ಹೆಸರು, ದುಡ್ಡು ಮಾಡುವುದಕ್ಕಿಂತ ಕೆಲಸ ಮಾಡಿದರೆ ಅವೆರಡೂ ತಾನಾಗಿಯೇ ಬರುತ್ತದೆಂಬ ಅವರ ಮಾತುಗಳು ಹೊಸಪೇಟೆಯ ಜನರ ಮನಸೂರೆಗೊಂಡವು.


ಉತ್ತರಕನ್ನಡದ ಒಬ್ಬ ಪ್ರತಿಭಾನ್ವಿತ ಸಾಧಕ ಯುವಕನಿಗೆ ಈ ಗೌರವ ಸಿಕ್ಕಿದ್ದಕ್ಕೆ ಅಭಿನಂದನೆಗಳ ಮಹಾಪೂರ ಹರಿದುಬಂದಿವೆ.