ಕುಮಟಾ: ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಆವಿಷ್ಕಾರಗಳಂತಹ ಕ್ಷೇತ್ರದ ಬಗ್ಗೆ ಗಮನ ಹರಿಸುವ ಮೂಲಕ ಸಮಾಜದಲ್ಲಿ ಜ್ಞಾನ ನೀಡುವ ಕೆಲಸವನ್ನು ಮಾಡುವುದು ಇಂದಿನ ಅಗತ್ಯತೆಯಾಗಿದ್ದು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗಬೇಕೆಂದು ಬಯಸಿ ಈಗಲೇ ಆ ದಿಶೆಯತ್ತ ಪ್ತಯತ್ನ ನಡೆಸುತ್ತಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರದ ಶಿಕ್ಷಕ ವೃಂದ ನಿಜಕ್ಕೂ ಶ್ಲಾಘನೀಯ ಎಂದು ಅಹಮದಾಬಾದಿನ ಕನ್ನಡ ಸಂಘದ ಮುಖ್ಯಸ್ಥರಲ್ಲಿ ಒಬ್ಬರಾದ ಕಿಶೋರ್ ಶಾನಭಾಗ ಅಭಿಪ್ರಾಯಪಟ್ಟರು. ಅವರು ಸರ್ ಸಿ.ವಿ.ರಾಮನ್ ರವರ ಜನ್ಮದಿನದ ಅಂಗವಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮಕ್ಕಳಲ್ಲಿರುವ ಸೂಕ್ತ ಪ್ರತಿಭೆ ಗುರುತಿಸುವಂತಹ ಕಾರ್ಯ ಇದು. ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

RELATED ARTICLES  ಉತ್ತರ ಕನ್ನಡದ ಶಾಲಾ ಕಾಲೇಜುಗಳು ನಾಳೆ ಬಂದ್..!

ಪ್ರತೀ ವರ್ಷದಂತೆ ಈ ವರ್ಷವೂ ರಾಷ್ಟ್ರೀಯ ವಿಜ್ಞಾನ ದಿನವನ್ನು ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವೈವಿದ್ಯಮಯವಾಗಿ ಆಚರಿಸಲಾಯಿತು. ಪ್ರಬಂಧ ಮಂಡನೆ, ಉಪನ್ಯಾಸ, ವಿಜ್ಞಾನ ಮಾದರಿ ತಯಾರಿಕೆ ಹಾಗೂ ವಿಜ್ಞಾನ ವಸ್ತುಪ್ರದರ್ಶನದ ಮೂಲಕ ರಾಷ್ಟ್ರೀಯ ವಿಜ್ಞಾನ ದಿನವನ್ನು ಅರ್ಥಪೂರ್ಣಗೊಳಿಸಲಾಯಿತು.

ವಿಜ್ಞಾನ ಶಿಕ್ಷಕಿ ಉಷಾ ಭಟ್ಟ ಅವರು ಮಾತನಾಡಿ ಸರ್ ಸಿ.ವಿ.ರಾಮನ್ ಬಾಲ್ಯದಲ್ಲಿ ತೋರಿದ ಪ್ರತಿಭೆ, ಬೆಳಕಿನ ಕುರಿತಾಗಿ ಅವರಲ್ಲಿ ಮೂಡಿ ಬಂದ ಪ್ರಶ್ನೆ ಹಾಗೂ ಅವರ ಸಂಶೋಧನೆಗಳನ್ನು ವಿವರಿಸಿದರು.. “ರಾಮನ್ ಎಫೆಕ್ಟ”ಬಗ್ಗೆ ವಿವರಿಸಿ ಮಕ್ಕಳಿಂದ ಪ್ರಶಂಸೆಗೆ ಪಾತ್ರರಾದರು.

ಮಕ್ಕಳು ತಮ್ಮ ಜ್ಞಾನದ ಅನ್ವಯದ ದೃಷ್ಟಿಯಿಂದ ಶಿಕ್ಷಕಿಯರಾದ ಶ್ರೀಮತಿ ಉಷಾ ಭಟ್ಟ ಹಾಗೂ ಮಹೇಶ್ವರಿ ನಾಯಕ, ಕಾವ್ಯಶ್ರೀ ಪಟಗಾರ ರವರ ಮಾರ್ಗದರ್ಶನದಲ್ಲಿ ತಯಾರಿಸಿದ ವಿವಿಧ ಕ್ರಿಯಾತ್ಮಕ ವಿಜ್ಞಾನ ಮಾದರಿಗಳು ಪ್ರದರ್ಶಗೊಂಡವು. ಜ್ವಾಲಾಮುಖಿ, ಪರಿಸರ ಪ್ರೇಮಿ ಶೌಚಾಲಯ, ಗಾಳಿಯಿಂದ ವಿದ್ಯುತ್, ಗೋಬರ್ ಗ್ಯಾಸ್ ಇನ್ನೂ ಮುಂತಾದ ಮಾದರಿಗಳನ್ನು ತಯಾರಿಸಿದ ಮಕ್ಕಳು ಅವುಗಳ ಕಾರ್ಯಚಟುವಟಿಕೆ ಬಗ್ಗೆ ವಿವರಿಸಿ ಪ್ರಯೋಗಗಳನ್ನು ಮಾಡಿ ತೋರಿಸಿದರು.

RELATED ARTICLES  ಹಿರೇಗುತ್ತಿಯಲ್ಲಿ ಡಾ.ಗಿರೀಶ ನಾಯ್ಕರಿಗೆ ಸನ್ಮಾನ ಕಾರ್ಯಕ್ರಮ

ಕಾರ್ಯಕ್ರಮದ ವೇದಿಕೆಯಲ್ಲಿ ವಿಶ್ವಸ್ಥಮಂಡಳಿ ಸದಸ್ಯರಾದ ರಾಮನಾಥ ಕಿಣಿ, ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್. ದೇಶಭಂಡಾರಿ,ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತಾ ನಾಯ್ಕ, ಶಿಕ್ಷಕಿಯಾದ ವಿನಯಾ ನಾಯಕ, ಬಾಲಮಂದಿರದ ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗಡೆ ಇದ್ದರು. ಶಿಕ್ಷಕ ಗಣೇಶ ಜೋಶಿ ಸರ್ವರನ್ನೂ ವಂದಿಸಿದರು. ಮಹೇಶ್ವರಿ ನಾಯಕ ನಿರೂಪಿಸಿದರು.