ಕುಮಟಾ :ವಿಜ್ಞಾನ ಸತ್ಯದ ಶೋಧನೆ. ಎಲ್ಲಿ ಏಕೆ ಹೇಗೆ ಯಾವಾಗ ಯಾರು ಏನು ಎನ್ನುವಂತ ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಮೂಡಿದಾಗ ಕಲಿಕೆ ಫಲಪ್ರದವಾಗುತ್ತದೆ ವಿಷಯದ ಬಗ್ಗೆ ಆಳವಾದ ತಿಳುವಳಿಕೆ ಮೂಡುತ್ತದೆ. ಶಾಲೆಯ    ತರಗತಿ ಗಳಲ್ಲಿ    ವಾರಕ್ಕೊಮ್ಮೆ ನಡೆಯುವ ಸರಳ ಪ್ರಯೋಗಗಳು ವಿದ್ಯಾರ್ಥಿಗಳಲ್ಲಿ ಕುತೂಹಲ ಭರವಸೆಗಳು ಹುಟ್ಟಿಸುತ್ತವೆ ವಾರ್ಷಿಕವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ವಿಜ್ಞಾನದ ಮಾದರಿಗಳು ಪ್ರಯೋಗಗಳು ಎಲ್ಲವನ್ನು ಕ್ರೋಢೀಕರಿಸಿ ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ಪ್ರದರ್ಶಿಸಿ ಉಳಿದ ವಿದ್ಯಾರ್ಥಿಗಳಿಗೆ ವಿವರಿಸಿದಾಗ ಭವಿಷ್ಯದ ವಿದ್ಯಾರ್ಥಿಗಳಲ್ಲೂ ಒಂದಿಷ್ಟು ಆಸಕ್ತಿ ಮೂಡುವುದರ ಜೊತೆಗೆ ಕಲಿಕೆಯಲ್ಲಿ ಚಿಂತನೆ ಯೋಚನೆಗಳು ಮೊಳಕೆಯೊಡೆಯುತ್ತವೆ ಅದು ಮುಂದೆ ಬೀಜವಾಗಿ ಹೆಮ್ಮರವಾಗುತ್ತದೆ ಎಂದು ಕುಮಟಾದ ಕ್ಷೇತ್ರ ಸಂಪನ್ಮೂಲ ಕೇಂದ್ರ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಉಲ್ಲಾಸ ನಾಯ್ಕ ಅಭಿಪ್ರಾಯಪಟ್ಟರು. ಅವರು ಹೆಣ್ಣು ಮಕ್ಕಳ ಶಾಲೆ ಹೆಗಡೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಉದ್ಘಾಟಕರಾಗಿ ಮಾತನಾಡುತ್ತಾ ಈ ಶೈಕ್ಷಣಿಕ ವರ್ಷದಲ್ಲಿ ಇದೇ ಶಾಲೆಯ ವಿದ್ಯಾರ್ಥಿನಿ ರೇವತಿ ಮಾಸ್ತಿ ಮುಕ್ರಿ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಯ ಪ್ರೋತ್ಸಾಹವನ್ನು ರಾಜ್ಯಮಟ್ಟದಲ್ಲಿ ಬೆಳಗಿರುವುದು ಶಾಲೆಗೂ ಶಿಕ್ಷಕರಿಗೂ ಊರಿಗೂ ಇಲಾಖೆಗೂ ಹೆಮ್ಮೆ ತರುವಂತಹ ವಿಷಯ ಎಂದರು.

RELATED ARTICLES  ಕೆಲಸ ಮುಗಿಸಿ ಕೈತೊಳೆಯಲು ಹೋದಾತ ನೀರುಪಾಲು


ಅತಿಥಿಗಳಾಗಿ ಆಗಮಿಸಿದ ಸಿ ಆರ್ ಪಿ ಗಳಾದ ನರಹರಿ ಭಟ್ಟ       ಎಸ್ ಪಿ  ಹೆಗಡೆ ಕುಮಟಾ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ದೇವರಾಯ ಗಾಂವಕರ ವಿಜ್ಞಾನ ವಸ್ತು ಪ್ರದರ್ಶನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ್ ನಾಯ್ಕ ನಮ್ಮ ಶಾಲೆಯ ಶಿಕ್ಷಕ ವೃಂದದವರು ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವನ್ನು ಕಾಪಾಡಿಕೊಂಡಿದ್ದಾರೆ
ಜೊತೆಗೆ ಕಲಿಕಾ ಪೂರಕ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ
ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು. ಪ್ರಭಾರಿ ಮುಖ್ಯಶಿಕ್ಷಕಿ ಮಂಗಲಾ ಹೆಬ್ಬಾರ್ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಶ್ರೀಧರ್ ಗೌಡ ಪ್ರಾಸ್ತಾವಿಕ ಮಾತನಾಡುತ್ತಾ  ಭಾರತರತ್ನ ಸಿ.ವಿ. ರಾಮನ್ ರವರು 1928 ಫೆಬ್ರುವರಿ 28ರಂದು ಮಂಡಿಸಿದ ಬೆಳಕಿನ ಚದುರುವಿಕೆ ಯ ರಾಮನ್ ಇಫೆಕ್ಟ್ ಗೆ 1930 ರಲ್ಲಿ ನೋಬೆಲ್ ಪಾರಿತೋಷಕ ಪಡೆಯಿತು. ಸಿವಿ ರಾಮನ್ ಏಷ್ಯಾಖಂಡದ ಮೊಟ್ಟ ಮೊದಲ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಯಾದರು. ಫೆಬ್ರುವರಿ 28 ರಾಷ್ಟ್ರೀಯ ವಿಜ್ಞಾನ ದಿನ ಎಂದು ಭಾರತ ಸರ್ಕಾರ ಘೋಷಿಸಿದೆ ಎಂದರು.

RELATED ARTICLES  ಹಿರೇಗುತ್ತಿ ಹೈಸ್ಕೂಲ್ ವಿಜ್ಞಾನ ಪ್ರಬಂಧ ಮಂಡನೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ


ಶಿಕ್ಷಕ ನಾಗರಾಜ್ ಶೆಟ್ಟಿ ವಂದಿಸಿದರು. ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರೇವತಿ ಮಾಸ್ತಿ ಮುಕ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ರೇಣುಕಾ ನಾಯ್ಕ, ನಯನ ಪಟಗಾರ, ಆಶಾ ನಾಯ್ಕ ಸಹಕರಿಸಿದರು.