ಕುಮಟಾ: ತಾಲೂಕಿನ ಡಯಟ್ ಸಭಾಭವನದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಮಾವೇಶದಲ್ಲಿ ಗೌರವ ಡಾಕ್ಟರೇಟ್ ಪಡೆದ ಜಿಲ್ಲೆಯ ಮೊದಲ ಶಿಕ್ಷಕ ರವೀಂದ್ರ ಭಟ್ಟ ಸೂರಿಯವರನ್ನು ಸನ್ಮಾನಿಸಲಾಯಿತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿ ಯವರು ಸನ್ಮಾನ ಕಾರ್ಯಕ್ರಮ ನೆರವೇರಿಸಿ ಸೂರಿಯವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲಾಪಂಚಾಯತ್ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ರತ್ನಾಕರ ನಾಯ್ಕರವರು ಇವರ ಸಾಧನೆಯನ್ನು ಉಲ್ಲೇಖಿಸಿ ವಿದ್ಯಾರ್ಥಿಗಳೂ ಹೀಗೆ ಸಾಧಿಸುವ ಛಲ ಹೊಂದಿರಬೇಕು. ಸೂರಿಯವರು ತಮ್ಮ ವೃತ್ತಿ ಹಾಗೂ ಪ್ರವೃತ್ತಿ ಎರಡರಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದ ಹೊಲನಗದ್ದೆ ಶಾಲೆಯನ್ನು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ತಂದು ನಿಲ್ಲಿಸಿದ್ದು ಇವರ ಕಾರ್ಯತತ್ಪರತೆಗೆ ಸಾಕ್ಷಿ ಎಂದರು.

RELATED ARTICLES  ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿಗಳ ಸಾಧನೆ.

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಶ್ರೀ ರವೀಂದ್ರ ಭಟ್ಟ ಸೂರಿಯವರು ಇದು ನನ್ನ ವಿದ್ಯಾರ್ಥಿಗಳಿಗೆ ಸಂದ ಗೌರವ ಎಂದು ಭಾವಿಸುತ್ತೇನೆ ಎಂದರು. ಡಿ.ಡಿ.ಪಿ.ಐ.ಶ್ರೀ ಹರೀಶ ಗಾಂವಕರ್, ಡಯಟ್ ಪ್ರಾಂಶುಪಾಲರಾದ ಶ್ರೀ ಈಶ್ವರ ನಾಯ್ಕ, ನೋಡಲ್ ಅಧಿಕಾರಿಗಳಾದ ಶ್ರೀ ನಾಗರಾಜ್ ನಾಯಕ, ಬಿ.ಇ.ಓ ಶ್ರೀ ರಾಜೇಂದ್ರ ಭಟ್ಟ , ಡಾ// ಜಿ.ಜಿ.ಹೆಗಡೆ, ಡಾ. ಜಿ.ಜಿ.ಸಭಾಹಿತ್ , ಕುಮಟಾ ಸ್ಥಳಿಯ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸುಧಾ ಗೌಡ ಉಪಸ್ಥಿತರಿದ್ದರು. ಸನ್ಮಾನ ಕಾರ್ಯಕ್ರಮವನ್ನು ಶ್ರೀ ಆರ್.ಟಿ.ಹೆಬ್ಬಾರ ನಿರೂಪಿಸಿದರು.

RELATED ARTICLES  ವಿದ್ಯುತ್ ಅವಘಡ : ವಿದ್ಯಾರ್ಥಿ ಸಾವು.