ಅಂಕೋಲಾ: ತಾಲೂಕಿನ ಕೆ. ಎಲ್. ಈ ಶಿಕ್ಷಣ ಮಹಾವಿದ್ಯಾಲಯದ ಅಂಕೋಲಾ-ಎನ್ ಎಸ್ ಎಸ್ ಘಟಕ 1 & 2ರ ಅಡಿಯಲ್ಲಿ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭ ಸರ್ಕಾರಿ ಹಿರಿಯ ಪ್ರಾಥಮಿಕ ಮೀನುಗಾರಿಕೆ ಶಾಲೆ ಗಾಬಿತವಾಡ ಜರುಗಿತು ಈ ಕಾರ್ಯಕ್ರಮವನ್ನು ಶ್ರೀ ಮಹಾದೇವ ಗೌಡ POD ಭಾವಿಕೇರಿ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಳೆದ ವರ್ಷ ಅಂಕೋಲಾ ತಾಲ್ಲೂಕಿನ ಗಾಬಿತವಾಡದ ನೆರೆ ಪ್ರದೇಶದಲ್ಲಿ ಸ್ವಚ್ಛತೆಯ ಅರಿವು ಮತ್ತು ಸಮೀಕ್ಷೆ ಕೈಗೊಳ್ಳುವುದರಿಂದ ಪ್ರತಿಯೊಬ್ಬರಲ್ಲಿ ಪರಿಸರ ಕಾಳಜಿ ಬೆಳೆಯುವುದು ಎಂದು ಹೇಳಿದರು.ಮಾಜಿ ತಾ.ಪಂ ಅಧ್ಯಕ್ಷ ಅಪ್ಪಣ್ಣ ಕಾಂಬ್ಳೆ ಮಾತನಾಡಿ ಪರಿಸರ ಪ್ರಜ್ಞೆ ಮೂಡಿಸುವ ಅನೇಕ ಕಾರ್ಯಯೋಜನೆಗಳು ಯಶಸ್ವಿಯಾಗಿ ಜಾರಿಯಾಗಬೇಕು. ಅದರಿಂದ ಪ್ರತಿಯೊಬ್ಬರಲ್ಲಿ ಜಾಗೃತಿ ಬೆಳೆದು ಸಾಮಾಜಿಕ ಹೊಣೆಗಾರಿಕೆ ಬೆಳೆಯುತ್ತದೆ ಎಂದರು.
ವೇದಿಕೆಯಲ್ಲಿದ್ದ ಭಾವಿಕೇರಿ ಗ್ರಾ.ಪಂ ಅಧ್ಯಕ್ಷೆ ಸರಿತಾ ಬಲೇಗಾರ , ಪ್ರಾಚಾರ್ಯ ಡಾ.ವಿನಾಯಕ ಹೆಗಡೆ , ಎನ್‍ಎಸ್‍ಎಸ್ ಅಧಿಕಾರಿ ರಾಘವೇಂದ್ರ ಅಂಕೋಲೇಕರ ಮಾತನಾಡಿದರು.ಶಿಬಿರಾಧಿಕಾರಿ ಪುಷ್ಪಾ ನಾಯ್ಕ ವಂದಿಸಿದರು, ದೀಪಾ ನಾಯ್ಕ ನಿರೂಪಿಸಿದರು. ಎನ್. ಎಸ್. ಎಸ್ ಸ್ವಯಂ ಸೇವಕರು, ಶಾಲಾ ಮುಖ್ಯೋಪಾಧ್ಯಾಯರು, ಎಸ್ ಡಿ ಎಮ್ ಸಿ ಅಧ್ಯಕ್ಷರು, ಊರ ನಾಗರಿಕರು, ಗ್ರಾಮ ಪಂಚಾಯ್ತಿ ಸದಸ್ಯ ಹಾಜರಿದ್ದರು
ವರದಿ :ಶ್ರೀ ರಾಘವೇಂದ್ರ ಅಂಕೋಲೆಕರ