ಹೊನ್ನಾವರ ಮತ್ತು ಭಟ್ಕಳ ದಲ್ಲಿ ಫೆ.27 ರಂದು ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಗೆ ಅರ್ಹರಿದ್ದು ಆಯ್ಕೆಯಾದ ಅಂತೂ ಹದಿನೇಳು ರೋಗಿಗಳಿಗೆ ಕುಮಟಾದ “ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆ”ಯಲ್ಲಿ ನೇತ್ರ ತಜ್ಙ ಡಾ.ಮಲ್ಲಿಕಾರ್ಜುನ ರವರು ಯಶಸ್ವೀ ಶಸ್ತ್ರಚಿಕಿತ್ಸೆ ನಡೆಸಿ ಶನಿವಾರದಂದು ಬೀಳ್ಕೊಟ್ಟರು.

ಆಸ್ಪತ್ರೆಯು ಪ್ರತಿ ತಿಂಗಳ ನಾಲ್ಕನೇ ಗುರುವಾರದಂದು ಹೊನ್ನಾವರ ಭಟ್ಕಳದಲ್ಲಿ ಶಿಬಿರ ನಡೆಸುತ್ತ ಬಂದಿದ್ದು ,
ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸಿ ಇವರನ್ನು ಶನಿವಾರ ಡಿಸ್ಚಾರ್ಜ್ ಮಾಡಲಾಗುತ್ತಿದೆ.

RELATED ARTICLES  ಹೊನ್ನಾವರದಲ್ಲಿ ಯಶಸ್ವಿಯಾದ ಕ್ಯಾಂಪಸ್ ಸಂದರ್ಶನ

ಕಳೆದ 13 ವರ್ಷಗಳಿಂದ ಇದೇ ರೀತಿಯಾಗಿ ಪ್ರತಿ ತಿಂಗಳಿನ ಮೊದಲ ಗುರುವಾರ ಕುಮಟಾದಲ್ಲೂ , ಮೂರನೇಯ ಗುರುವಾರ ಗೋಕರ್ಣ ಅಂಕೋಲಾಗಳಲ್ಲೂ ಉಚಿತ ಶಿಬಿರ ನಡೆಸುತ್ತ ಬರಲಾಗಿದೆ.

RELATED ARTICLES  ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಗೆ ಸಿದ್ಧತೆ.

ಆಸ್ಪತ್ರೆಯು ಹೊಂದಿದ ಸ್ವಂತ ವಾಹನದಲ್ಲಿ ರೋಗಿಗಳಿಗೆ ಪ್ರಯಾಣ ವ್ಯವಸ್ಥೆ, ಆಸ್ಪತ್ರೆಯಲ್ಲಿನ ವಸತಿ ವ್ಯವಸ್ಥೆ , ಶಸ್ತ್ರಚಿಕಿತ್ಸೆ, ಊಟೋಪಚಾರ ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ.

ಜಿಲ್ಲೆಯ ಕರಾವಳಿಯ ಬಡವರು, ವೃದ್ಧರು ಈ ಸೌಲಭ್ಯದ ಉಪಯೋಗ ಪಡೆಯಬಹುದಾಗಿದೆಯೆಂದು ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಮಾಹಿತಿ ನೀಡಿದರು.

ಆಸ್ಪತ್ರೆಯ ದೂರವಾಣಿ ಸಂಖ್ಯೆ
08386 224480.