ಹೊನ್ನಾವರ: ಅರೆ ಅಂಗಡಿಯ ಗ್ರಾ.ಪಂ ಹಿಂದಿನ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ಅಂದರ್-ಬಾಹರ್ ಜುಗರಾಟ ಆಡುತ್ತಿದ್ದಾಗ ಪೊಲೀಸರು ದಾಳಿನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ವರದಿಯಾಗಿದೆ.

RELATED ARTICLES  ಉಕ್ರೇನ್ - ರಷ್ಯಾ ಯುದ್ಧದ ಪರಿಣಾಮ:ಗಗನಕ್ಕೇರಿದ ಅಡುಗೆ ಎಣ್ಣೆ ದರ.

ಪ್ರಭಾತ ನಗರದವರು ಎನ್ನಲಾದ ಮೂವರನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಅರೆ ಅಂಗಡಿಯವನು ಎನ್ನಲಾಗಿದೆ. ದಾಳಿ ವೇಳೆ ಒಬ್ಬಾತ ಪರಾರಿಯಾಗಿದ್ದಾನೆ.

3,110 ರೂಪಾಯಿ, ಇಸ್ಪೀಟ್ ಎಲೆಗಳು, ಪೇಪರ್ ಹಾಗೂ ಇನ್ನಿತರ ವಸ್ತುಗಳು ಪೋಲೀಸ್ ವಶವಾಗಿದೆ.

RELATED ARTICLES  ಮಣಿದ ಪೌರಸ್ ಫುಡ್ಸ್ ಕಂಪನಿ : ಸಾಂಘಿಕ ಹೋರಾಟಕ್ಕೆ ಸಿಕ್ಕ ಜಯ ಎಂದ ನ್ಯಾಯವಾದಿ ನಾಗರಾಜ ನಾಯಕ.

ಪಿ.ಎಸ್.ಐ ಶಶಿಕುಮಾರ ಸಿ. ಆರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.