ಹೊನ್ನಾವರ: ಇಲ್ಲಿನ ಹಡಿನಬಾಳದ ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆ ಹಾಗೂ ಸಂಗೀತ ನಾಟಕ ಅಕಾಡೆಮಿ ದೆಹಲಿ ಇದರ ಸಹಬಾಗಿತ್ವದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ, 18ನೇ ವರ್ಷದ ವಾರ್ಷಿಕೋತ್ಸವ ರಾಗಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ, ಸಂಸ್ಮರಣೆ ಸನ್ಮಾನ, ಸಂಗೀತ ಕಾರ್ಯಕ್ರಮಗಳು ಅಪಾರ ಜನರ ಮನಮುಟ್ಟಿತು. 3 ಗಂಟೆಯಿಂದ ರಾಗಶ್ರೀ ವಿದ್ಯಾರ್ಥಿಗಳ ಸಂಗೀತ ಕಾರ್ಯಕ್ರಮ ನಡೆದು ನಂತರ 6 ಗಂಟೆಯಿಂದ ನಡೆದ ಸಭಾ ಕಾರ್ಯಕ್ರಮವನ್ನು ಪ್ರೊ ಮಲ್ಲೇಪುರಂ ಜಿ. ವೆಂಟೇಶ ಖ್ಯಾತ ಅಂಕಣಕಾರರು ಹಾಗೂ ವಿಶ್ರಾಂತ ಕುಲಪತಿಗಳು ಬೆಂಗಳೂರು ಇವರು ಉದ್ಘಾಟಿಸಿದರು. ನಂತರ ಮಾತನಾಡಿ ಅವರು ರಾಷ್ಟ್ರೀಯ ಐಕ್ಯತೆಗೆ ಕಲೆ ಮಾದ್ಯಮವಾಗಿದೆ. ಸಂಗೀತದಿಂದ ಶಾಂತಿ ಬಿಡುಗಡೆ ಆಗುತ್ತದೆ. ಭಾರತೀಯ ಕಲೆಗಳನ್ನು ಎಷ್ಟೆ ಸಾಧನೆ ಮಾಡಿದರು. ಅಷ್ಟೆ ಪರಿಪೂರ್ಣತೆ ಹೊಂದಲು ಸಾದ್ಯವಿಲ್ಲ ಎಂದು ಹಲವು ಉದಾಹರಣೆಗಳ ಮೂಲಕ ಸುಂದರವಾಗಿ ಮಾತನಾಡಿದರು. ಇನ್ನೊರ್ವ ಅಭ್ಯಾಗತರಾದ ಖ್ಯಾತ ಸಾಹಿತಿ ಶ್ರೀಧರ ಬಳಗಾರ ಮಾತನಾಡಿ ಸಂಗೀತ ನೃತ್ಯ ಮೊದಲಾದ ಕಲೆಗಳನ್ನು ಶೋತೃಗಳು ಆಸ್ಪಾದಿಸಿ ಬಂದು ಸಮೂಹ ಸಮುದಾಯವಾಗಿ ಸಾಂಸ್ಕøತಿಕ ಚಲನೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಈ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದು ರಾಗಶ್ರೀ ಕಾರ್ಯವನ್ನು ಸ್ತುತಿಸಿದರು.
ಸಂಗೀತ ನಾಟಕ ಅಕಾಡೆಮಿ ದೆಹಲಿ ಇದರ ಸದಸ್ಯರಾದ ಶಿವಾನಂದ ಹೆಗಡೆ ಕೆರೆಮನೆ ಸಂಘಟಕರ ಕಷ್ಟವನ್ನು ವಿವರಿಸಿ 30 ಕೋಟಿ ಕಲಾವಿದರು ಈ ದೇಶದಲ್ಲಿದು ಕಲೆಗಳಿಂದ ದೇಶದ ಸಂಸ್ಕøತಿ ಉಳಿದಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಗಿರೀಶ್ಚಂದ್ರ ಅವರು ವ್ಯಕ್ತಿಗಿಂತ ಕಲೆ ಮುಖ್ಯ ಕಲೆ ಸುಲಭದಲ್ಲಿ ಕರಗತ ಆಗದು ರಾಗಶ್ರೀ ಗ್ರಾಮೀಣ ಭಾಗದಲ್ಲಿ ಎಲ್ಲಾ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಕೊಂಡಾಡಿದರು. ವೇದಿಕೆಯಲ್ಲಿ ವೇ. ಮೂ| ಶಿವರಾಮ ಭಟ್ಟ ಅಲೇಖ ರಾಷ್ಟ್ರ ಪ್ರಶಸ್ತಿ ಪುರಸ್ಕøತರು, ಅಂತರಾಷ್ಟ್ರೀಯ ಕಲಾವಿದರಾದ ಡಾ ಅಶೋಕ ಹುಗ್ಗಣ್ಣವರ, ಪ್ರೊ ಎಸ್ ಶಂಭು ಭಟ್ಟ ಕಡತೋಕ ರಾಗಶ್ರೀ ಅಧ್ಯಕ್ಷ ವಿದ್ವಾನ ಶಿವಾನಂದ ಭಟ್ಟ ಉಪಸ್ಥಿತರಿದ್ದರು.
ಪಂ. ಕೃಷ ಅವಧಾನಿ ಕರ್ಕಿ, ಪಂ. ಎಸ್. ಎಂ. ಭಟ್ಟ ಕಟ್ಟಿಗೆ, ಡಾ ಟಿ.ವಿ ಭಟ್ಟ ಕವಲಕ್ಕಿ, ವೇ. ಮೂರ್ತಿ ರಾಮ ಭಟ್ಟ ಹಡಿನಬಾಳ, ಶ್ರೀ ವೆಂಕಟರಮಣ ಹೆಗಡೆ ಎಸ್. ಆರ್. ಎಲ್. ಸಮೂಹ ಸಂಸ್ಥೆ ಮಾಲೀಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ಎಸ್.ಎಸ್.ಎಲ್.ಸಿ ಯಲ್ಲಿ 625 ಅಂಕವನ್ನು ಪಡೆದ ನಾಗಾಂಜಲಿ ನಾಯ್ಕ ಯುವ ವಿಜ್ಞಾನಿ ಸದಾನಂದ ಹೆಗಡೆ, ವಿನಾಯಕ ಭಟ್ಟ ಹರಡಸೆ ಇವರನ್ನು ಪುಸ್ಕರಿಸಲಾಯಿತು. ನಂತರದಿ ಪಂ ಜಿ ಆರ್. ಭಟ್ ಬಾಳೇಗದ್ದೆ ಹೆಸರಿನಲ್ಲಿ ನೀಡುವ ರಾಗಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಸುಪ್ರಸಿದ್ಧ ಗಾಯಕಿ ವಿದುಷಿ ಭಾರತಿ ಪ್ರತಾಪ್ ಬೆಂಗಳೂರು ಇವರಿಗೆ ನೀಡಿ ಸನ್ಮಾನಿಸಲಾಯಿತು. ನಂತರ ಅವರಿಂದ ಸಂಗೀತ ಕಛೇರಿ ನಡೆಯಿತು. ರಾಗ ಬಾಗಶ್ರೀ, ದಾದ್ರಾ, ತರಾನಾ ಹಾಗೂ ದಾಸರ ಪದಗಳನ್ನು ಹಾಡುವ ಮೂಲಕ ನೆರದ ಅಪಾರ ಶೋತೃಗಳನ್ನು ಮಂತ್ರ ಮುಗ್ದಗೊಳಿಸಿದರು. ಇವರಿಗೆ ಅಷ್ಟೇ ಉತ್ತಮವಾಗಿ ಪಂ ವ್ಯಾಸ ಮೂರ್ತಿ ಕಟ್ಟಿ ಬೆಂಗಳೂರು ಸಂವಾದಿನಿ ಸಾಥ್ ನೀಡಿದರೆ ಅಷ್ಟೆ ಉತ್ತಮವಾಗಿ ಶಂತನು ಶುಕ್ಲ ಮುಂಬೈ ಇವರ ತಬಲಾ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮೆರಗು ತಂದರು. ನಂತರ ಕುಮಾರ ಪ್ರಸನ್ನ ಹೆಗಡೆ ಕಪ್ಪೆಕೇರಿ ಇವನಿಂದ ಕಿರು ಯಕ್ಷಗಾನ ಹಾಗೂ ವಿದುಷಿ ಕಾವ್ಯ ಹೆಗಡೆ ದಿಬ್ಬಣಗಲ್ ಇವರಿಂದ ಭರತನಾಟ್ಯ ಕಾರ್ಯಕ್ರಮಗಳು ಜರುಗಿತು. ಕನ್ನಡ ಮತ್ತು ಸಂಸ್ಕøತ ಇಲಾಖೆಯ ಸಹಕಾರದಿಂದ ಸುಪ್ರಸಿದ್ಧ ಕಲಾವಿದರಿಂದ
ಮಾಗದ ವಧೆ ಯಕ್ಷಗಾನ ನಡೆಯಿತು. ಇದರಲ್ಲಿ ಶ್ರೀ ಗೋಪಾಲ ಆಚಾರಿ ತೀರ್ಥಳ್ಳಿ, ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಶ್ರೀಧರ ಕಾಸರಕೋಡ ಮುಂತಾದವರು ಭಾಗವಹಿಸಿ ಅಪೂರ್ವ ಯಕ್ಷಗಾನವನ್ನು ಪ್ರದರ್ಶಿಸಿದರು. ಈ ಎಲ್ಲಾ ಕಾರ್ಯಕ್ರಮದ ಸಂಘಟಕರಾದ ರಾಗಶ್ರೀ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ಟ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರೆ ರಾಗಶ್ರೀ ಕಾರ್ಯದರ್ಶಿ ವಿದ್ವಾನ್ ಎನ್.ಜಿ.ಹೆಗಡೆ ಕಪ್ಪೆಕೇರಿ ವಂದನೆ ಸಲ್ಲಿಸಿದರು. ಪ್ರಶಾಂತ ಹೆಗಡೆ ಮೂಡ್ಲಮನೆ ಸುಂದರವಾಗಿ ನಿರೂಪಿಸಿದರು. ಪ್ರಾಚಾರ್ಯ ಎನ್.ಜಿ.ಭಟ್ಟ, ರಾಗಶ್ರೀ ಸದಸ್ಯರಾದ ಎಸ್.ವಿ.ಹೆಗಡೆ, ಎಸ್.ಎನ್.ಹೆಗಡೆ, ಜಿ.ಆರ್.ಹೆಗಡೆ, ಹಾಗೂ ಡಾ| ಗಣಪತಿ ಭಟ್ಟ ಕತ್ಕಾಲ್, ವಿದ್ವಾನ್ ಗಣಪತಿ ಭಟ್ಟ ಕವಲಕ್ಕಿ, ವಿ.ಜಿ.ಹೆಗಡೆ ಗುಡ್ಗೆ ಕಲಾವಿದರನ್ನು ಗೌರವಿಸಿದರು. ಜನಮಾನಸದಲ್ಲಿ ಅಚ್ಚೂತ್ತಿದ ಕಾರ್ಯಕ್ರಮವಾಗಿ ಉತ್ತಮ ಸಂಘಟನೆಯ ಶಿಸ್ತು ಬದ್ಧ ಕಾರ್ಯಕ್ರಮವಾಗಿ ನಿರೂಪಿತವಾಯಿತು.