ಕುಮಟಾ: ತಾಲೂಕಿನ ಕೊಂಕಣ ಎಜ್ಯುಕೇಶ್ ಟ್ರಸ್ಟ್ ನ ಸಭಾಂಗಣದಲ್ಲಿ ದಿನಾಂಕ 07-03-2020 ರಂದು ಶನಿವಾರ ಮಧ್ಯಾಹ್ನ 02 : 30 ರಿಂದ 04 : 30ರ ವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ಸಿದ್ಧತೆಯ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಉಡುಪಿಯ ಹೆಸರಾಂತ ಶಿಕ್ಷಣ ಸಂಸ್ಥೆಯಾದ ತ್ರಿಶಾ ಕ್ಲಾಸಸ್ ನ ಸಂಸ್ಥಾಪಕರಾದ ಶ್ರೀ ಗೋಪಾಲಕೃಷ್ಣ ಭಟ್ಟರವರ ನೇತ್ರತ್ವದಲ್ಲಿ ಈ ಕಾರ್ಯಾಗಾರ ಜರುಗಲಿದೆ. ಗೋಪಾಲಕೃಷ್ಣ ಭಟ್ಟರವರು ಸುಮಾರು 22 ವರ್ಷಳಿಂದ ಶೈಕ್ಷಣಿಕ ತರಬೇತುದಾರರಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಕಾರ್ಯಾಗಾರ ನಡೆಸಿ ಅನುಭವ ಹೊಂದಿದವರಾಗಿದ್ದಾರೆ. ಪಿ.ಯು.ಸಿಯಲ್ಲಿ ರಾಜ್ಯಮಟ್ಟದಲ್ಲಿ ರ್ರ್ಯಾಂಕ್ ಗಳಿಸಿರುವ ಇವರು ಚಾರ್ಟೆಡ್ ಎಕೌಂಟೆಂಟ್ ಮತ್ತು ಕೋಸ್ಟ ಎಕೌಂಟೆಂಟ್ ಆಗಿಯೂ ಹೆಸರು ಗಳಿಸಿದವರು. ಇವರು ಹೆಸರಾಂತ ಶಿಕ್ಷಣ ಸಂಸ್ಥೆಗಳಾದ ಆಳ್ವಾಸ್, ಎಕ್ಸಲೆಂಟ್, ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿಯೂ ಹೆಸರು ಗಳಿಸಿದವರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮಬಾರಿ ಕುಮಟಾದಲ್ಲಿ ತ್ರಿಶಾ ಸಂಸ್ಥೆಯ ಕಾರ್ಯಗಾರವು ನಡೆಯುತ್ತಿದ್ದು, ಎಸ್.ಎಸ್.ಎಲ್.ಸಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಆಗಮಿಸಿ ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದೆಂದು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ವಿಠಲ ನಾಯಕ್ ಹಾಗೂ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಚಂದನ್ – 9845761399 ಅಥವಾ ರಾಮ್- 9740237227 ಅವರನ್ನು ಸಂಪರ್ಕಿಸಲು ವಿನಂತಿಸಿದ್ದಾರೆ.