ಶಿರಸಿ: ಪಿಎಸ್ಐ ಒಬ್ಬರು ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಟೋ ಚಾಲಕನೋರ್ವನ ಮೇಲೆ ಕೈ ಮಾಡಿದ ಪರಿಣಾಮ ನೂರಾರು ಆಟೋ ಚಾಲಕ, ಮಾಲಕರು ಠಾಣೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ ಎನ್ನಲಾಗಿದೆ.

RELATED ARTICLES  ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿಂದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.

ತಾಲೂಕಿನ ಉಸುರಿ ರಸ್ತೆಯ ಕಾಲುಗುಂಡಿಯ ಆಟೋ ಚಾಲಕನಿಗೆ ನಗರದ ಮಾರುಕಟ್ಟೆ ಠಾಣೆಯ ಪಿಎಸ್ಐ ಕೈ ಮಾಡಿದ್ದಾರೆ ಎಂದು ಆಟೋ ಚಾಲಕರು ತಿಳಿಸಿದ್ದಾರೆ.

ತಕ್ಷಣ ಆಟೋ ಚಾಲಕನನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆದರೆ ಆಟೋ ಚಾಲಕನಿಗೆ ಕೈ ಮುರಿದಿದ್ದು, ನ್ಯಾಯ ಕೊಡಿಸವಂತೆ ಆಟೋ ಸಂಘದವರು ಡಿಎಸ್ಪಿ ಕಚೇರಿ ಎದುರು ಜಮಾಯಿಸಿ ಪ್ರತಿಭಟಿಸಿದರು ಎನ್ನಲಾಗಿದೆ.

RELATED ARTICLES  ಭಟ್ಕಳ ಕಸಾಪದಿಂದ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಎನ್.ನಾಯ್ಕ ಅವರಿಗೆ ಸನ್ಮಾನ.

ಆಟೋ ಚಾಲಕರೂ ಸಹ ರಸ್ತೆ ನಿಯಮ ಹಾಗೂ ಜಾತ್ರಾ ವಿಶೇಷ ನಿಯಮ ಪಾಲಿಸುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ.