ಹೆಗಡೆ: “ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ”, ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ಮೋರಾರ್ಜಿ ಶಾಲೆ ಹೆಗಡೆ ಯಲ್ಲಿ ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ಸಮಸ್ಯೆಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಹದಿಹರೆಯ ಅವಧಿಯಲ್ಲಿ ಮಕ್ಕಳಲ್ಲಿ ದೈಹಿಕ, ಭಾವನಾತ್ಮಕ, ಸಾಮಾಜಿಕ, ಮಾನಸಿಕ ಬದಲಾವಣೆ ಉಂಟಾಗುವುದು. ಆ ಅವಧಿಯಲ್ಲಿ ಮಕ್ಕಳು ತುಂಬಾ ಗೊಂದಲ ಹೊಂದುತ್ತಾರೆ.. ಅಂತಹ ಸಮಯದಲ್ಲಿ ಸೂಕ್ತ ಪರಿಹಾರದ ಅವಶ್ಯವದೆ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ ಕುಮಟಾ ಬ್ರಾಂಚ್‍ನ ವ್ಯವಸ್ಥಾಪಕರಾದ ಶ್ರೀಮತಿ ಸಂತಾನ್ ಲೂಯಿಸ್ ರವರು ಉಪನ್ಯಾಸ ನೀಡಿದರು
ಹದಿಹರೆಯವು ಸಂದಿಗ್ಧ ,ಸಂಕ್ರಮಣದ ಕಾಲಗಟ್ಟ ಈ ಅವಧಿಯಲ್ಲಿ ಮಕ್ಕಳು ವಿಚಾರ ಮಾಡುವ ಶಕ್ತಿ ಬೇರೆ ಬೇರೆ ಆಗಿರುತ್ತದೆಂಬಬದರ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸುವ ಮೂಲಕ “ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ ಕುಮಟಾ ಬ್ರಾಂಚ್‍ನ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡ ಉಪನ್ಯಾಸ ನೀಡಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಬೆಳವಣಿಗೆಯ ಹಂತ & ಲಭಿಸುವ ಸೇವೆಗಳ ಕುರಿತು ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಶಿಕ್ಷಕರಾದ ವಸಂತಲಕ್ಷ್ಮಿ ಹೆಗಡೆ ಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೋರಾರ್ಜಿ ಶಾಲೆಯ ಶಿಕ್ಷಕರಾದ ಅಶೋಕ್ ಗಾಂವಕರ್ ಅಧ್ಯಕ್ಷಿಯ ಭಾóಷಣವನ್ನು ಮಾಡಿದರು.
ಮೋರಾರ್ಜಿ ಶಾಲೆ ಹೆಗಡೆಯ ಶಿಕ್ಷಕರಾದ ಪ್ರೇಕ್ಷಾ ನಾಯ್ಕ, ಮಾದೇವಿ ಗೌಡ & ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.