ಬೆಂಗಳೂರು: ಆಧುನಿಕ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ತಕ್ಷಶಿಲೆ ವಿವಿ ಮಾದರಿಯಲ್ಲಿ ಸಮಗ್ರ ಭಾರತೀಯ ಶಿಕ್ಷಣ ಹಾಗೂ ಕಲೆಗಳನ್ನು ಒಂದೇ ಸೂರಿನಡಿ ಕಲಿಸುವ ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಲೋಕಾರ್ಪಣೆ ಏಪ್ರಿಲ್ 26ರಂದು ನಡೆಯಲಿದ್ದು, ಮೊದಲ ಬ್ಯಾಚ್‍ಗೆ ಅರ್ಜಿ ಆಹ್ವಾನಿಸಲಾಗಿದೆ.


ಅರ್ಜಿ ಸಲ್ಲಿಕೆಗೆ ಮೇ 15 ಕೊನೆಯ ದಿನ.
ಮೊದಲ ವರ್ಷ ಮೂಲಾಧಾರ ಎಂಬ ಎರಡು ವರ್ಷದ ಕೋರ್ಸ್ ಆರಂಭಿಸಲಾಗುತ್ತದೆ. ಆದರೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಒಂದು ವರ್ಷದ ಬಾಲ ತರಗತಿ ಇರುತ್ತದೆ ಎಂದು ವಿವಿವಿ ಪ್ರಕಟಣೆ ಹೇಳಿದೆ.


ಮೂಲಾಧಾರ ಕೋರ್ಸ್ ಪಠ್ಯವಿಷಯದಲ್ಲಿ ವೇದಪಥ (ವೇದಮೂಲವಾದ ಭಾರತೀಯ ವಿದ್ಯೆ- ಕಲೆಗಳ ಸಮಗ್ರ ಪರಿಚಯ), ರಾಮಾಯಣ, ಮಹಾಭಾರತ, ಸಂಸ್ಕøತ ವ್ಯಾಕರಣ, ಆಯುರ್ವೇದ, ಯೋಗ, ಸಂಗೀತ, ಮಹಾಪುರುಷ ಚರಿತ್ರೆ, ಇಂಗ್ಲಿಷ್, ಕಂಪ್ಯೂಟರ್, ವಿಜ್ಞಾನ, ಸಂಪರ್ಕ ಸಂವಾದ ಕೌಶಲ, ಭಾರತದ ಸಂವಿಧಾನ, ಲೋಕಜ್ಞಾನ ಮತ್ತಿತರ ವಿಷಯಗಳು ಸೇರಿವೆ.
ಭಾರತೀಯ ವಿದ್ಯೆ, ಕಲೆಗಳ ಅಧ್ಯಯನಕ್ಕೆ ಬೇಕಾದ ಅರ್ಹತೆ, ಸಾಮಥ್ರ್ಯ ಮತ್ತು ಮನೋಭೂಮಿಕೆ ರೂಪಿಸುವುದು, ಪದವಿ ತರಗತಿಯಲ್ಲಿ ವಿಷಯದ ಆಯ್ಕೆಗೆ ಬೇಕಾದ ಸಮಗ್ರ ಭಾರತೀಯ ವಿದ್ಯೆ- ಕಲೆಗಳ ಸಾಮಾನ್ಯ ಜ್ಞಾನ ಪ್ರಾಪ್ತಿ, ವಿಶೇಷ ಕಲಿಕೆಗೆ ಬೇಕಾಗುವ ಭಾಷಾನೈಪುಣ್ಯ ಕರಗತ ಮಾಡಿಕೊಳ್ಳುವುದು ಹಾಗೂ ಸಮಗ್ರ ಭಾರತ- ಭಾರತೀಯ ಸಂಸ್ಕøತಿಯ ಪರಿಚಯವನ್ನು ಈ ಎರಡು ವರ್ಷಗಳ ಕೋರ್ಸ್‍ನಲ್ಲಿ ಪಡೆಯಬಹುದಾಗಿದೆ.

RELATED ARTICLES  ಕೆರೆ ಬೇಟೆ ಸಂದರ್ಭದಲ್ಲಿ ಗಲಾಟೆ : ಕೆಲಕಾಲ ಬಿಗುವಿನ ವಾತಾವರಣ


ಪೂರ್ವಾಂಕುರ (8-16 ವಯಸ್ಸು), ಉತ್ತರಾಂಕುರ (16 ರಿಂದ 24 ವರ್ಷ) ಹಾಗೂ ಫಲಿತ ಹೀಗೆ ಮೂರು ವಿಭಾಗಗಳಲ್ಲಿ ಕಲಿಕೆಗೆ ಅವಕಾಶವಿದ್ದು, ಜಾತಿ, ಮತ, ಲಿಂಗ, ಭಾಷಾಭೇದವಿಲ್ಲದೇ ಹಿರಿಯ ನಾಗರಿಕರು ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ ನಡೆಸುವ ದ್ವಾರಪರೀಕ್ಷೆಯೇ ಅರ್ಹತಾ ಮಾನದಂಡವಾಗಿರುತ್ತದೆ. ಕಲಿಕಾರ್ಥಿಗಳಿಗೆ ಸೂಕ್ತ ವಸತಿ ಮತ್ತು ಆಹಾರ ವ್ಯವಸ್ಥೆ ಇರುತ್ತದೆ.

RELATED ARTICLES  ಬ್ಯಾಂಕ್ ಖಾತೆಯಲ್ಲಿ ಹಣ ಕಡಿತ :ಪ್ರತಿಭಟನೆ


ಗೋಕರ್ಣ ಸಮೀಪದ ಅಶೋಕೆಯಲ್ಲಿರುವ ವಿವಿವಿ ಕಾರ್ಯಾಲಯ, ಗೋಕರ್ಣ ಮಹಾಬಲೇಶ್ವರ ದೇವಾಲಯ, ಬೆಂಗಳೂರು ಗಿರಿನಗರದ ಶ್ರೀರಾಮಾಶ್ರಮ, ಹೊಸನಗರದ ರಾಮಚಂದ್ರಾಪುರ ಮಠ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮಾಣಿಯಲ್ಲಿರುವ ಶ್ರೀರಾಮಚಂದ್ರಾಪುರ ಮಠದಲ್ಲಿ ಅರ್ಜಿ ನಮೂನೆಗಳು ಲಭ್ಯವಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ: ವ್ಯವಸ್ಥಾಪಕರು, ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ಅಶೋಕೆ, ಗೋಕರ್ಣ ಅಂಚೆ, ಕುಮಟಾ ತಾಲೂಕು, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ- 5581326. ದೂರವಾಣಿ: 9449595248, 9449595288.
ಆನ್‍ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಗಳನ್ನು https://vishnuguptavv.org/
ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.