ಕುಮಟಾ : ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ಉಡುಪಿಯ ಹೆಸರಾಂತ ಶಿಕ್ಷಣ ಸಂಸ್ಥೆಯಾದ ತ್ರಿಶಾ ಕ್ಲಾಸಸ್ ನ ಸಹಭಾಗಿತ್ವದಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ “ಪರೀಕ್ಷಾ ಸಿದ್ಧತೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.ತ್ರಿಶಾ ಕ್ಲಾಸಸ್ ನ ಸಂಸ್ಥಾಪಕರಾದ ಶ್ರೀ ಗೋಪಾಲಕೃಷ್ಣ ಭಟ್ಟರವರ ನೇತ್ರತ್ವದಲ್ಲಿ ನಡೆದ ಈ ಕಾರ್ಯಾಗಾರವನ್ನು ಶಿಕ್ಷಣ ಇಲಾಖೆಯ ಬಿ.ಆರ್.ಸಿ ಸಂಯೋಜಕಿ ಶ್ರೀಮತಿ ರೇಖಾ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮಬಾರಿ ಕುಮಟಾದಲ್ಲಿ ತ್ರಿಶಾ ಸಂಸ್ಥೆಯ ಕಾರ್ಯಾಗಾರ ಉದ್ಘಾಟಿಸಿದ ಶ್ರೀಮತಿ ರೇಖಾ ನಾಯ್ಕ ಉದ್ಘಾಟಕನಾ ನುಡಿಗಳನ್ನು ಹಂಚಿಕೊಳ್ಳುತ್ತಾ ಇಲ್ಲಿ ಇರುವ ವಿದ್ಯಾರ್ಥಿಗಳು ಕುಮಟಾ ತಾಲೂಕಿನ ವಿವಿಧ ಶಾಲೆಗಳ ಆಯ್ದ ವಿದ್ಯಾರ್ಥಿಗಳಾಗಿದ್ದೀರಿ ನೀವುಗಳು ತಾಲೂಕಿಗೆ ಕೀರ್ತಿ ತರುವ ವಿದ್ಯಾರ್ಥಿಗಳಾಗಿರಿ ಎಂದು ಶುಭ ಹಾರೈಸಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಶಿಕ್ಷಕ ಚಿದಾನಂದ ಭಂಡಾರಿ ಮಾತನಾಡಿ ದಕ್ಷಿಣ ಕನ್ನಡದಲ್ಲಿ ತ್ರಿಶಾ ಸಂಸ್ಥೆಯ ಬಗ್ಗೆ ಕೇಳಿದಾಗ ಮನಸ್ಸು ತುಂಬಿ ಬರುತ್ತದೆ. ತ್ರಿಶಾ ಸಂಸ್ಥೆ ಕೊಂಕಣದೊಂದಿಗೆ ಒಡಂಬಡಿಕೆ ಮಾಡಿಕೊಂಡು ಉತ್ತರ ಕನ್ನಡಕ್ಕೆ ಬರುತ್ತಿರುವುದು ಹೆಮ್ಮೆಯ ವಿಷಯ. ತ್ರಿಶಾ ಸಂಸ್ಥೆ ಹೆಸರಾಂತ ಶಿಕ್ಷಣ ಸಂಸ್ಥೆಗಳಾದ ಆಳ್ವಾಸ್, ಎಕ್ಸಲೆಂಟ್, ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿಯೂ ಹೆಸರು ಗಳಿಸಿದವರು. ಇಂತಹ ಸಂಸ್ಥೆ ಉತ್ತರ ಕನ್ನಡದಲ್ಲಿ ಕೊಂಕಣವನ್ನು ಆಯ್ದುಕೊಂಡು ನಮ್ಮ ಬಿ.ಕೆ ಭಂಡಾರಕರ್ ಅವರ ಸರಸ್ವತಿ ಪಿ.ಯು ಕಾಲೇಜಿನ ವಾಣಿಜ್ಯ ವಿಭಾಗವನ್ನು ವೈವಿದ್ಯಮಯವಾಗಿ ಮುನ್ನಡೆಸಲಿದ್ದು ಇದರ ಜೊತೆಗೆ ಸಿ.ಎ ಹಾಗೂ ಇನ್ನಿತರ ವಿಷಯಗಳ ಕೋರ್ಸಗಳನ್ನೂ ನಡೆಸಲಿರುವುದು ಸಂತಸ ತಂದಿದೆ ಎಂದರು. ಕಾರ್ಯಾಗಾರಕ್ಕೆ ಸ್ಪಂದಿಸಿದ ಶಿಕ್ಷಣ ಇಲಾಖೆಗೆ ಅಭಿವಂದನೆ ಸಲ್ಲಿಸಿದರು.
ಚಾರ್ಟೆಡ್ ಎಕೌಂಟೆಂಟ್ ಮತ್ತು ಕೋಸ್ಟ ಎಕೌಂಟೆಂಟ್ ಆಗಿದ್ದು ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಗೋಪಾಲಕೃಷ್ಣ ಭಟ್ಟರವರು
ಮಾತನಾಡಿ ಬೆಂಗಳೂರು ಉಡುಪಿ ಹಾಗೂ ಇನ್ನಿತರ ಕಡೆಗಳಲ್ಲಿ ಹೆಸರುಗಳಿಸಿದ ತ್ರಿಶಾ ಕ್ಲಾಸಸ್ ನವರು ಉತ್ತರ ಕನ್ನಡಕ್ಕೆ ಬರುತ್ತಿದ್ದೇವೆ, ಕೊಂಕಣದ ಜೊತೆಗೆ ಒಡಂಬಡಿಕೆ ಮಾಡಿಕೊಂಡು ನಾವು ಕ್ಲಾಸಸ್ ಮಾಡುತ್ತೇವೆ ಎಂದರು.
ಪರೀಕ್ಷೆ ಎಂಬ ಬಗ್ಗೆ ಭಯ ಬೇಡ, ಪರೀಕ್ಷೆ ಎದುರಿಸುವುದು ಸುಲಭದ ಆ ಬಗ್ಗೆ ಚಿಂತನೆ ಮಾಡಬೇಕು ಎಂದರು. ಮೈಡ್ ಅನ್ನು ಸರಿಪಡಿಸಬಹುದು ಆದರೆ ಮೈಂಡ್ ಸೆಟ್ ಅನ್ನು ಸರಿಪಡಿಸಬೇಕಾದವರು ನಾವೇ ಎಂದರು. ಈಗ ಕಾಲ ಬದಲಾಗಿದೆ ಕ್ಷಣ ಕ್ಷಣಕ್ಕೆ ಬದಲಾವಣೆಗಳು ಕಾಣುತ್ತಿದೆ. ಅಂತಹ ಕಾಲಕ್ಕೆ ನಾವು ಒಗ್ಗಬೇಕು ಎಂದು ಹೇಳಿದರು.
ಸುಮಾರು 22 ವರ್ಷಳಿಂದ ಶೈಕ್ಷಣಿಕ ತರಬೇತುದಾರರಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಕಾರ್ಯಾಗಾರ ನಡೆಸಿ ಅನುಭವಿದೆ ಆದರೆ ನನ್ನ ಬಾಲ್ಯ ಕಷ್ಟವಾಗಿತ್ತು. ಆ ಕಷ್ಟಗಳ ಬಗ್ಗೆಯೇ ಯಾರೂ ಚಿಂತನೆ ಮಾಡುತ್ತಾ ಕುಳಿತುಕೊಳ್ಳುವುದಕ್ಕಿಂತ ನಾವು ನಾವಾಗಿ ಬದುಕಬೇಕು ಎಂದರು.
ವೇದಿಕೆಯಲ್ಲಿ ಕೊಂಕಣ ಎಜ್ಯುಕೇಶನ್ ನ ವಿಶ್ವಸ್ಥರಾದ ರಮೇಶ ಪ್ರಭು ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಣ ಇಲಾಖೆಯ ಜಯಶ್ರೀ ಬಿರಾದಾರ, ಕೊಂಕಣ ಆಡಳಿತ ಮಂಡಳಿ ಸದಸ್ಯರಾದ ಡಿ.ಡಿ ಕಾಮತ್,ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್ ದೇಶಭಂಡಾರಿ, ಮಾತ್ರಮಂಡಳಿ ಸದಸ್ಯರುಗಳು ಹಾಗೂ ಪ್ರಾಂಶುಪಾಲರಾದ ಸುಲೋಚನಾ ರಾವ್ ಹಾಜರಿದ್ದರು. ಸಿ.ವಿ.ಎಸ್.ಕೆ ಮುಖ್ಯ ಶಿಕ್ಷಕಿ ಸುಮಾ ಪ್ರಭು ಎಲ್ಲರನ್ನೂ ಸ್ವಾಗತಿಸಿದರು. ಪ್ರಕಾಶ್ ಗಾವಡಿ ನಿರೂಪಿಸಿದರು.ತ್ರಿಶಾ ಕ್ಲಾಸಸ್ ನ ಚಂದನ್ ಹಾಗೂ ರಾಮ್ ಇದ್ದರು. ಎಸ್.ಎಸ್.ಎಲ್.ಸಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಆಗಮಿಸಿ ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆದುಕೊಂಡರು.