ಕುಮಟಾ: ನಾದಶ್ರೀ ಕಲಾ ಕೇಂದ್ರದಲ್ಲಿ ರೋಟರಿ ಕ್ಲಬ್ ನವರು ಸಂಘಟಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕ, ಸಾಹಿತಿ,ನಿರೂಪಕ ಡಾ.ರವೀಂದ್ರ ಭಟ್ಟ ಸೂರಿ ” ಬದುಕಿಗೊಂದು ಪಾಠ” ವಿಷಯದ ಕುರಿತು ಉಪನ್ಯಾಸ ನೀಡಿದರು.

ಪಾಠ ಎಂದ ಕೂಡಲೇ ನಮಗೆ ನೆನಪಾಗುವುದು ಶಾಲೆ , ಆದರೆ ಬದುಕಿನ ಪಾಠ ಕೇವಲ ಶಾಲೆಗಳಲ್ಲಿ ಸಿಗುವುದಿಲ್ಲ ಅದು ಪ್ರಕೃತಿಯಲ್ಲಿ, ನಮ್ಮ ಸುತ್ತ ಮುತ್ತ ನಡೆಯುವ ಘಟನೆಯಲ್ಲಿ, ಬದುಕಿನ ನಡೆಯಲ್ಲಿ ಸಿಗುತ್ತದೆ ಎಂಬುದನ್ನು ಹಲವಾರು ಕಥೆ ,ಘಟನೆಗಳ ಮೂಲಕ ಮನೋಜ್ಞವಾಗಿ ವಿವರಿಸಿದರು. ಬದುಕಿನಮಹತ್ವದಪಾಠಗಳಾದ “ವರ್ತಮಾನವನ್ನು ಸದುಪಯೋಗ ಪಡಿಸಿಕೊಳ್ಳಿ , ಮಕ್ಕಳಿಗೆ ಸಂಪತ್ತು ಕೂಡಿಡುವ ಬದಲು ಮಕ್ಕಳನ್ನೇ ಸಂಪತ್ತನ್ನಾಗಿ ಮಾಡಿ, ಸಂಬಂಧ ದ ಮಧ್ಯೆ ಸ್ವಾರ್ಥ ಬೇಡ , ಮುಖವಾಡದ ಬದುಕು ಬೇಡ, ಪರಿಸ್ಥಿತಿ ಬದಲಾದರೂ ಮನಸ್ಥಿತಿ ಬದಲಾಗದಿರಲಿ, ಒಳ್ಳೆಯ ಮಾತನಾಡಿ, ನಾವು ಬದಲಾಗಬೇಕು, ಸಂಗ್ರಹಿಸುವುದಿದ್ದರೆ ಒಳಿತನ್ನು ಸಂಗ್ರಹಿಸಿ, ಕೊನೆಯಲ್ಲಿ ಉಳಿಯುವುದು ಅದೊಂದೆ ಎಂಬುದನ್ನು ಮನಮುಟ್ಟುವಂತೆ ಅವರು ವಿವರಿಸಿದರು.

RELATED ARTICLES  ಹಿರೇಗುತ್ತಿ ಹೈಸ್ಕೂಲ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ಸುರೇಶ ಭಟ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಕಾರ್ಯದರ್ಶಿ ಶ್ರೀ ಕಿರಣ ಸ್ವಾಗತಿಸಿ ನಿರೂಪಿಸಿದರು. ರೋಟರಿ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

RELATED ARTICLES  ನಾಳೆಯಿಂದ ಹೇಗಿರಲಿದೆ ಲಾಕ್ ಡೌನ್..! ಅಂಗಡಿ ತೆರೆಯುವ ಸಮಯ ಎಷ್ಟು? ಏನೇನು ಮಾಡಬೇಕು ಗೊತ್ತೇ?