ಕುಮಟಾ: ತಾಲೂಕಿನ ಮುಸುಗುಪ್ಪಾದ ಕೋಟೆಹಕ್ಕಲದಲ್ಲಿ ಸಾಲಬಾಧೆಯಿಂದ ಬೇಸತ್ತು ರೈತನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿ ಮುಸಗುಪ್ಪಾ ಕೋಟೆಹಕ್ಕಲ ನಿವಾಸಿ ಮಾಬ್ಲು ಗಣಪು ಗೌಡ ಎಂಬುವವನಾಗಿದ್ದು ಈತನ ಸಹೋದರ ಈಶ್ವರ ಗೌಡ ಎಂಬಾತ ಕಳೆದ ಒಂದು ವರ್ಷದ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದ ಎನ್ನಲಾಗಿದೆ. ಈತ ಮೂರೂರು ಸೊಸೈಟಿಯಿಂದ, ಪಿ.ಎಲ್.ಡಿ ಬ್ಯಾಂಕಿನಿಂದ ಮತ್ತು ಕೈಗಡವಾಗಿ ಸುಮಾರು ಮೂರು ಲಕ್ಷ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ.

RELATED ARTICLES  ಚಿತ್ರಕಲೆಯಲ್ಲಿ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಧನೆ.

ಈತನ ಪತ್ನಿ ಮಾದೇವಿ ಗೌಡ ಕೆಲವು ದಿನಗಳ ಹಿಂದೆ ಬಿದ್ದು ತಲೆಗೆ ಪೆಟ್ಟು ಬಿದ್ದಿದ್ದ ಪರಿಣಾಮ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎನ್ನಲಾಗಿದೆ.

RELATED ARTICLES  ಶಿರಸಿಯಲ್ಲಿ ಪ್ರದರ್ಶನ ಕಂಡಿತು ಅಂಗದಾನಗಳು ಪುರಾಣ ಸಮ್ಮತವೇ? ಕುರಿತಾದ ಪರಿಕಲ್ಪನೆಯ ರೂಪಕ