ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಕಛೇರಿಯಲ್ಲಿ ಪ್ರಸ್ತುತ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.*

*ಹುದ್ದೆಗಳ ವಿವರ*

*ಶೀಘ್ರಲಿಪಿಗಾರರು -15 ಹುದ್ದೆಗಳು (ಉಳಿದ ಮೂಲ ವೃಂದದ ಹುದ್ದೆಗಳು-10 ಮತ್ತು ಸ್ಧಳೀಯ ವೃಂದದ ಹುದ್ದೆಗಳು-05)*

*ಪ್ರಮುಖ ದಿನಾಂಕಗಳು*

• *ಅಂಚೆ ಮೂಲಕ ಅರ್ಜಿಗಳನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಗೆ ನಿಗಧಿ ಪಡಿಸಿದ ಕೊನೆಯ ದಿನಾಂಕ: 31.08.2017.*

• *ಅರ್ಜಿ ಸಲ್ಲಿಸಲು ನಿಗಧಿ ಪಡಿಸಿದ ಕೊನೆಯ ದಿನಾಂಕ: 11.09.2017*

*ವೇತನ ಶ್ರೇಣಿ: ರೂ*

*16000-29600/-*

*ಹುದ್ದೆಗಳ ಆಯ್ಕೆಗಾಗಿ ಮಂಡಳಿಯು ನಿಗಧಿಪಡಿಸಿರುವ ನಮೂನೆಯಲ್ಲಿಯೇ ಅರ್ಜಿಗಳನ್ನು ಸಲ್ಲಿಸಬೇಕು. ಇತರೆ ಯಾವುದೇ ನಮೂನೆಗಳಲ್ಲಾಗಲೀ ಅಥವಾ ಬೆರಳಚ್ಚು/ಛಾಯ (ಫೋಟೋ) ಪ್ರತಿ ಮಾಡಿರುವ, ಕೈ ಬರಹದಿಂದ ಸಲ್ಲಿಸಲ್ಪಡುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.*

*ಅರ್ಜಿ ನಮೂನೆಯನ್ನು ನೇರವಾಗಿ ಪಡೆಯಲು ಇಚ್ಚೆಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆ ಶುಲ್ಕ ರೂ.25/-ನ್ನು ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆಂಪೇಗೌಡ ರಸ್ತೆ, ಬೆಂಗಳೂರು-560 009, ಇವರ ಪದನಾಮಕ್ಕೆ ಸಂದಾಯವಾಗುವಂತೆ ಐಪಿಒ/ಡಿಡಿ ಮೂಲಕ ಅಥವಾ ಈ ಕಛೇರಿಯ ಲೆಕ್ಕಪತ್ರ ಶಾಖೆಯಲ್ಲಿ ಹಣವನ್ನು ಪಾವತಿಸಿ ನಿಗದಿತ ಅರ್ಜಿ ನಮೂನೆಯನ್ನು ಪಡೆಯಬಹುದು.*

*ಅಂಚೆ ಮೂಲಕ ಅರ್ಜಿಗಳನ್ನು ಪಡೆಯಲು ಅಪೇಕ್ಷಿಸುವ ಅಭ್ಯರ್ಥಿಗಳು ರೂ.45/-ರ ಮೌಲ್ಯದ ಅಂಚೆ ಚೀಟಿ ಅಂಟಿಸಿರುವ ಸ್ವ ವಿಳಾಸದ 20 x 30 ಸೆ.ಮೀ. ಅಳತೆಯುಳ್ಳ ಲಕೋಟೆಯೊಡನೆ ಅರ್ಜಿ ನಮೂನೆ ಶುಲ್ಕ ರೂ.25/- ನ್ನು ‘ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆಂಪೇಗೌಡ ರಸ್ತೆ, ಬೆಂಗಳೂರು-560 009,’ ಇವರ ಪದನಾಮಕ್ಕೆ*

RELATED ARTICLES  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ.

*ಸಂದಾಯವಾಗುವಂತೆ ಐ.ಪಿ.ಒ/ಡಿ.ಡಿ. ಮೂಲಕ ಪಾವತಿಸಿ ದಿನಾಂಕ: 31-08-2017 ರೊಳಗೆ ಸದರಿ ಸ್ವ ವಿಳಾಸದ ಲಕೋಟೆಯನ್ನು ಮೇಲ್ಕಂಡ ಕಛೇರಿಗೆ ಕಳುಹಿಸಿ ಪಡೆಯಬಹುದಾಗಿದೆ.*

*ನಿಗದಿತ ಶುಲ್ಕ:- ಶುಲ್ಕ ಪಾವತಿ ಮಾಡುವ ವಿವರ*

*ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿಸಿದೆ. ಇತರೆ*

*ಪ್ರವರ್ಗದ ಅಭ್ಯರ್ಥಿಗಳು ಶುಲ್ಕ ರೂ.150/- ಗಳನ್ನು, ಐಪಿಒ/ಡಿಡಿ*

*ಮೂಲಕ ‘ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ,*

*ಕೆಂಪೇಗೌಡ ರಸ್ತೆ, ಬೆಂಗಳೂರು-560 009’ ಇವರ ಪದನಾಮಕ್ಕೆ ಸಂದಾಯವಾಗುವಂತೆ ಪಡೆದು*

*ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.*

*ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ*

*ಶೈಕ್ಷಣಿಕ ವಿದ್ಯಾರ್ಹತೆ:- ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕೆಳಕಂಡ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಸದರಿ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಅರ್ಜಿಯ ನಿಗದಿತ ಅಂಕಣದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು ಹಾಗೂ ಅವುಗಳ ಒಂದೊಂದು ಛಾಯಾ (ಫೋಟೋ) ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.*

*1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.*

*2. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪರೀಕ್ಷೆ ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆಯ ಶೀಘ್ರಲಿಪಿ ಪರೀಕ್ಷೆ ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.*

RELATED ARTICLES  ರಂಗಭೂಮಿ ಕೃತಿಗಳಿಗೆ ಬಹುಮಾನ ಬಯಸಿದರೆ ನೀವು ಅರ್ಜಿ ಸಲ್ಲಿಸಿ.

*ವಯೋಮಿತಿ*

*ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಮತ್ತು ಈ ಕೆಳಗಿನಂತೆ ವರ್ಗಾವಾರು ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.*

*ಸಾಮಾನ್ಯ ವರ್ಗ :35 ವರ್ಷಗಳು*

*ಪ್ರವರ್ಗ 2ಎ, 2ಬಿ, 3ಎ, 3ಬಿ :38 ವರ್ಷಗಳು*
*ಪ.ಜಾ/ಪ.ಪಂ/ಪ್ರವರ್ಗ-1: 40 ವರ್ಷಗಳು*

*ಆಯ್ಕೆ ವಿಧಾನ*

*1. ಅಭ್ಯರ್ಥಿಯು ನಿಗದಿತ ಪರೀಕ್ಷೆಗಳಲ್ಲಿ ಪಡೆದ ಶೇಕಡ ಒಟ್ಟು ಅಂಕಗಳ ಆಧಾರದ ಮೇಲೆ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುವುದು.*

*2. ಸಂಬಂಧಿಸಿದ ಉದ್ಯೋಗ ವಿನಿಮಯ ಕಛೇರಿಯಿಂದಲೂ ಸಹ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಳ್ಳಲಾಗುವುದು.*

*3. ಭರ್ತಿ ಮಾಡಿದ ಅರ್ಜಿಗಳನ್ನು ವಿಲೇಖನಾಧಿಕಾರಿ, ಶೀಘ್ರಲಿಪಿಗಾರರ ಹುದ್ದೆಗಳ ನೇಮಕಾತಿ ಪ್ರಾಧಿಕಾರ,*

*ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆಂಪೇಗೌಡ ರಸ್ತೆ,*

*ಬೆಂಗಳೂರು- 560 009, ಇವರಿಗೆ ಇವರಿಗೆ ಪಾವತಿಯಾಗುವಂತೆ ಮೀಸಲಾತಿ ಪ್ರಮಾಣ ಪತ್ರ, ಜನ್ಮ ದಿನಾಂಕದ ಬಗೆಗಿನ ದಾಖಲೆ, ವಿದ್ಯಾರ್ಹತೆಯ ಬಗೆಗಿನ ಛಾಯಾ (ಫೋಟೋ) ಪ್ರತಿ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ದಿನಾಂಕ: 11-09-2017 ರ ಸಂಜೆ 05-30 ಗಂಟೆ ಒಳಗಾಗಿ ಸಲ್ಲಿಸತಕ್ಕದ್ದು.*
*NOTIFICATION*✍
http://ksat.kar.nic.in:8080/Notification_Stenographer.pdf