ಕುಮಟಾ: ತಾಲ್ಲೂಕಿನ ನಾಗೂರು ಗ್ರಾಮದ ಸುಗ್ಗಿ ತಂಡವು ಮೂರು ದಿನಗಳಿಂದ ವಿವಿಧೆಡೆ ಸುಗ್ಗಿ ನ್ರತ್ಯ ಪ್ರದರ್ಶಿಸಿ ಗಮನ ಸೆಳೆದರು.

ಹೋಳಿ ಹಬ್ಬದ ಅಂಗವಾಗಿ ಪ್ರತಿವರ್ಷ 45ಕ್ಕೂ ಹೆಚ್ಚು ಮಂದಿಯಿಂದ ಕೂಡಿದ ಎರಡು ತಂಡಗಳು ಮನೆಮನೆಗಳಿಗೆ ತೆರಳಿ ಸುಗ್ಗಿ ಕುಣಿತವನ್ನು ಪ್ರದರ್ಶಿಸುವುದು ರೂಢಿಯಲ್ಲಿದೆ. ಬಣ್ಣ ಬಣ್ಣದ ಹೂವು, ನವಿಲುಗರಿ, ತುರಾಯಿಗಳನ್ನು ತಲೆಗೆ ಕಟ್ಟಿಕೊಂಡು ಸುಗ್ಗಿ ಹಾಡಿನೊಂದಿಗೆ ಕುಣಿಯುವುದನ್ನು ನೋಡುವುದೇ ಬಲು ಸೊಗಸು.

RELATED ARTICLES  ಕುಮಟಾದಲ್ಲಿ ಆಸ್ಪತ್ರೆ ಪಕ್ಕಾ..!

ಶನಿವಾರ ಬ್ರಹ್ಮೂರು, ಕಮ್ಮಿಕೇರಿ, ಕಬಗಾಲ್ ಗ್ರಾಮಗಳಲ್ಲಿ ಸುಗ್ಗಿ ಕುಣಿದು ಸಂಭ್ರಮಿಸಿದರು.

‘ನಮ್ಮ ಸುಗ್ಗಿ ಆಚರಣೆ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದ್ದು, ಪೂರ್ವಜರಿಂದ ಬಂದಿರುವ ಆಚರಣೆಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ನಾಗೂರು, ಸಂತೆಗದ್ದೆ, ಕಡಕೋಡ, ಹೆಗ್ಗಲೆ, ಬ್ರಹ್ಮೂರು, ಯಲವಳ್ಳಿ ಮುಂತಾದ ಗ್ರಾಮಗಳಿಗೆ ನಡಿಗೆಯಲ್ಲೇ ಸಂಚರಿಸುತ್ತೇವೆ. ಹತ್ತು ಹದಿನೈದು ಕಿಲೋಮೀಟರ್ ದೂರದವರೆಗೆ ಸಂಚರಿಸುವುದರಿಂದ ರಾತ್ರಿ ಆಯಾ ಗ್ರಾಮದಲ್ಲಿ ವಾಸ್ತವ್ಯ ಹೂಡುತ್ತೇವೆ. ಮಂಗಳವಾರ ಮುಕ್ತಾಯಗೊಳ್ಳಲಿದೆ’ ಎಂದು ಪ್ರಮುಖರಾದ ಮಂಜುನಾಥ ಮರಾಠಿ ಮಾಹಿತಿ ನೀಡಿದರು.

RELATED ARTICLES  ಆತ್ಮಲಿಂಗ ಪೂಜೆ ನೆರವೇರಿಸಿದ ಪ ಪೂ ಶ್ರೀ ಶ್ರೀ ಭೀಮಾಶಂಕರ ಮಹಾರಾಜ್

ಅನಂತ ಗಣು ಮರಾಠಿ, ಶಾಂಬಾ ಮರಾಠಿ, ಮಂಜುನಾಥ ತಿಮ್ಮಾ ಮರಾಠಿ, ಶಿವರಾಮ, ದಾಮೋದರ, ಪುರುಷೋತ್ತಮ ಮರಾಠಿ ಮುಂತಾದವರಿದ್ದರು.