ಭಟ್ಕಳ: ಇಲ್ಲಿನ ಬಸ್ ನಿಲ್ದಾಣದ ಎದುರು ಇರುವ ಪ್ರತಿಷ್ಠಿತ ಹೋಟೆಲ್ ಶ್ರೀನಿವಾಸ ಡಿಲಕ್ಸನಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ತನ್ನ ಕೆಲಸಗಾರನ ಮೇಲೆ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿ ಹೊಟೆಲ್ ಮಾಲಿಕರಾದ ರಜನಿ ಮಾಧವ ಭಟ್ ಸತ್ವಾಧಾರ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದು ಈ ಹಲ್ಲೆ ನಡೆಸಿದ್ದು ಆಡಳಿತ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ದಿವಾಕರ್ ಶೆಟ್ಟಿ ಆಗಿದ್ದು. ಈ ಘಟನೆ ಬಗ್ಗೆ ನಮಗೂ ಬೇಸರವಿದೆ ಹಾಗೂ ಕೆಲಸಗಾರರನ್ನು ಸರಿಯಾಗಿ ನೋಡಿಕೊಳ್ಳಲು ತಾಕೀತು ಮಾಡಿದ್ದರೂ ಈ ರೀತಿ ಮಾಡಲಾಗಿದೆ ಅದು ಅಂಪೂರು ಕುಂದಾಪುರದ ಸದ್ಯ ನಮ್ಮ ಹೊಟೆಲ್ ಮ್ಯಾನೇಜರ್ ದಿವಾಕರದ ಶೆಟ್ಟಿ ಮಾಡಿದ್ದೇ ವಿನಃ ಮಾಲಿಕರು ಮಾಡಿದ್ದು ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES  ನೇಣಿಗೆ ಶರಣಾದ ಅಂಕೋಲಾದ ಯುವಕ

ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಲಕ್ಷ್ಮಣ ನಾಗಪ್ಪ ನಾಯ್ಕ ಎಂಬಾತನು ನಗರ ಠಾಣೆಯಲ್ಲಿ
ಹೊಟೆಲ್ ಮ್ಯಾನೇಜರ್ ದಿವಾಕರದ ಶೆಟ್ಟಿ ವಿರುದ್ಧವೇ ಪ್ರಕರಣ ದಾಖಲಿಸಿದ್ದಾನೆ ಎಂದು ಸ್ಪಷ್ಟಪಡಿಸಿದೆ.

RELATED ARTICLES  ಹುಡ್ಲಮನೆ ಮಂಜಣ್ಣ ಅವರಿಗೆ ' ಜೀವನ ಸಾಧಕ ' ಪ್ರಶಸ್ತಿ : 'ತವರುಮನೆ' ಆಲೆಮನೆ ಹಬ್ಬದಲ್ಲಿ ಸಾಹಿತ್ಯದ ಘಮ ಘಮ

ಮಾಲಕರ ತಪ್ಪಿಲ್ಲದೆಯೂ ಮಾಲಕರು ಹೆಸರು ಹೇಳುವಂತಾದ ವರದಿಯ ಕುರಿತಾಗಿ ತಿಳಿದು ಸತ್ವಾಧಾರ ನ್ಯೂಸ್ ಕೂಡಾ ಸೂಕ್ತ ಹಿಮ್ಮಾಹಿತಿ ಪ್ರಕಟಿಸಿದೆ.