ರಾಜ್ಯ ಸರ್ಕಾರದ ನೂತನ ಮಂತ್ರಿಗಳಾಗಿ ಆಯ್ಕೆಯಾಗಿ, ಕಾರ್ಮಿಕ ಮತ್ತು ಸಕ್ಕರೆ ಖಾತೆಯ ಹೊಣೆಯೊಂದಿಗೆ ಸೇವೆಸಲ್ಲಿಸುತ್ತಿರುವ ಹೆಮ್ಮೆಯ ಹವ್ಯಕ ಶ್ರೀ ಶಿವರಾಮ ಹೆಬ್ಬಾರ್ ಅವರಿಗೆ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದ್ದು, 10.03.2020   ಮಂಗಳವಾರ ಸಂಜೆ 6.00  ಗಂಟೆಗೆ ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

RELATED ARTICLES  ಛಾಯಾ ಅರುಣ ಉಭಯಕರಗೆ ‘ರೋಟರಿ ಅಕ್ಕಾ’ ಪುರಸ್ಕಾರ

ಸಚಿವ ಶ್ರೀ ಶಿವರಾಮ ಹೆಬ್ಬಾರ್ ಮಹಾಸಭೆಯ ಗೌರವವನ್ನು ಸ್ವೀಕರಿಸಲಿದ್ದು, ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾಸಭೆಯ ಪದಾಧಿಕಾರಿಗಳು ಹಾಗೂ ಸಮಾಜದ ಹಿರಿಯರು, ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಚಿವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.

RELATED ARTICLES  ಆರೋಗ್ಯದಲ್ಲಿ ಚೇತರಿಕೆ ಪದ್ಮಶ್ರೀ ಸುಕ್ರಜ್ಜಿ ಆಸ್ಪತ್ರೆಯಿಂದ ಬಿಡುಗಡೆ.