ಕುಮಟಾ: ಅಳ್ನಾವರದ ಸರ್ಕಾರಿ ಪದವಿ ಕಾಲೇಜು ಇತ್ತೀಚೆಗೆ ಸಂಘಟಿಸಿದ್ದ ಕರ್ನಾಟಕ ವಿಶ್ವವಿದ್ಯಾನಿಲಯದ ಅಂತರ್ ಮಹಾವಿದ್ಯಾಲಯಗಳ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಟ್ಟಣದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ತಂಡವು ಧಾರವಾಡದ ಜೆ.ಎಸ್.ಎಸ್. ಮಹಾವಿದ್ಯಾಲಯ ತಂಡವನ್ನು ಸೋಲಿಸಿ, ಕರ್ನಾಟಕ ವಿಶ್ವವಿದ್ಯಾನಿಲಯದ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಉತ್ತಮ ಸಾಧನೆ ಮಾಡಿದ ಈ ತಂಡಕ್ಕೆ ತರಬೇತಿ ನೀಡಿದ ಜಿ.ಡಿ.ಭಟ್ಟ, ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಮುರಳೀಧರ ಪ್ರಭು, ಕಾರ್ಯದರ್ಶಿ ವಿನೋದ ಪ್ರಭು, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಡಾ. ಎಸ್.ಎನ್.ಶೆಟ್ಟಿ, ಕ್ರೀಡಾಸಂಘದ ಉಪಾಧ್ಯಕ್ಷ ಎಂ.ಜಿ.ನಾಯ್ಕ, ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.