ಕಾರವಾರದ ಬಾಡ ಗ್ರಾಮದಲ್ಲಿ ತನ್ನ ಪುರಾತನ ಆಚರಣೆ ಮತ್ತು ದೈವ ಕಾರ್ಯಗಳಿಗೆ ಪ್ರಖ್ಯಾತವಾಗಿರುವ ಕಳಸ ಕುಟುಂಬವು ಹೋಳಿ ಸಂದರ್ಭದಲ್ಲಿ ಸುಗ್ಗಿಕುಣಿತ ಆಚರಿಸುವುದು ಕೂಡ ಒಂದು .
ಆಕರ್ಷಣೀಯವಾಗಿರುತ್ತದೆ. ಈ ಆಚರಣೆಯು ತನ್ನ ಪ್ರಾಚೀನ ಪರಂಪರೆಯಿಂದ ಮುಂದುವರೆಯುತ್ತಾ ಬಂದಿದೆ ಇಂದಿಗೂ ಕೂಡ ಕಳಸ ಕುಟುಂಬವು ಇದನ್ನು ಆಚರಿಸುವು ಮೂಲಕ ತನ್ನ ಸಾಂಸ್ಕೃತಿಕ ಮತ್ತು ಕಲೆಯನ್ನು ಇಂದಿನವರೆಗೂ ಸಂರಕ್ಷಿಸುತ್ತಾ ಬಂದಿದೆ. 18 ಗ್ರಾಮದ ಸುಗ್ಗಿಯನ್ನು ಏಳು ದಿನಗಳ ಕಾಲ ಆಡುತ್ತಾರೆ. ಐದು ದಿನ ಮಾಂಡದಲ್ಲಿ ಆಡಿ ಆರನೇ ದಿನ ಬೇರೆ ಬೇರೆ ಪುರಾತನ ಕಾಲದಿಂದ ಬಂದಂತಹ ನಗರದಲ್ಲಿ ತೆರಳಿ ಹಾಗೂ ದೇವಸ್ಥಾನಕ್ಕೆ ತೆರಳಿ ಸುಗ್ಗಿ ನೃತ್ಯವನ್ನು ಪ್ರದರ್ಶನ ನೀಡುತ್ತಾರೆ. ಮಧ್ಯಾಹ್ನ 4 ಗಂಟೆ ಹೋಗಿ ಮುಂಜಾನೆ 5 ಗಂಟೆ ಬರುತ್ತಾರೆ. 10 ರಿಂದ 15 ಕಿ.ಮೀ ನಡಿಗೆಯಲ್ಲಿ ಸಂಚರಿಸಿ ತಲೆಗೆ ಸಿಂಗಾರಿ ಧರಿಸಿ ಭಾರಿ ವಿಜೃಂಭಣೆಯಿಂದ ಸುಗ್ಗಿ ಕುಣಿತವನ್ನು ಪ್ರದರ್ಶಿಸುತ್ತಾರೆ. ಹಾಗೂ ರಂಗಪಂಚಮಿ ದಿವಸ ಬಹಳಷ್ಟು ಜನರು ಬಂದು ಸುಗ್ಗಿ ಕೋಲಾಟವನ್ನು ಮಾಂಡದಲ್ಲಿ ಆಡಿ ತದನಂತರ ರಾತ್ರಿ ಕರಿ ದೇವರ ಸಾನ್ನಿಧ್ಯದಲ್ಲಿ ಸುಗ್ಗಿಯಲ್ಲಿ ಆಡಿದ ಕೋಲನ್ನು ಇಟ್ಟು ದೇವರಿಗೆ ಪೂಜೆ ಸಲ್ಲಿಸಿ ಕಳಸ ಮನೆತನದ ಸುಗ್ಗಿಯನ್ನು ಸಂಪೂರ್ಣಗೊಳಿಸುತ್ತಾರೆ.
ಅದಕ್ಕೆ ಬಹಳಷ್ಟು ಜನ ಬಂದು ಒಳ್ಳೆಯ ರೀತಿಯಲ್ಲಿ ಸುಗ್ಗಿ ಮೇಳಕ್ಕೆ ಸಹಾಯ ನೀಡುತ್ತಾರೆ. ಪುರಾತನ ಕಾಲದ ಕಳಸವಾಡದ ಅತ್ಯಂತ ಸುಂದರವಾದ ಸುಗ್ಗಿ ಕುಣಿತವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಈ ಸುಗ್ಗಿ ಕುಣಿತವನ್ನು ನೋಡಲು ಬರುತ್ತಾರೆ. ಈ ಸುಗ್ಗಿ ಕುಣಿತವು ಕಾರವಾರದ ಬಾಡ ಗ್ರಾಮದ 18 ಗ್ರಾಮಕ್ಕೆ ಸಂಬಂಧಿಸಿದ ಪ್ರಾಚೀನ ಸುಗ್ಗಿಕುಣಿತ ವಾಗಿರುವುದು ಕಳಸ ಕುಟುಂಬದ ಹೆಮ್ಮೆಯಾಗಿದೆ.