೧. ಎಲ್ಲಾ ವ್ರತಗಳಿಗಿಂತ ಅಗ್ರಗಣ್ಯವಾಗಿರುವ ಪೂಜೆ..,

ಪ್ರಾಯಶ್ಚಿತ್ತ ಸಂಕಲ್ಪದಿಂದ ಪ್ರಾರಂಭ ಮಾಡಿ.., ಸಂಕಲ್ಪಕ್ಕೆ ಮುಂಚೆ..

೨. ಗಣಪತಿಯು ಆದಷ್ಟೂ ಬೆಳ್ಳಿ ಅಥವ ಮಣ್ಣಿನ ಗಣಪತಿ ತುಂಬಾ ಶ್ರೇಷ್ಟ..
ದೂರ್ವಾ ಸಗಣಿ ಗಣಪತಿ ಮಹಾಶ್ರೇಷ್ಟ…

೩. ಮನೆಯ ಹಿರಿಯರ ಆಶೀರ್ವಾದದೊಂದಿಗೆ ವ್ರತಾರಂಭ ಮಾಡಿ..

೪. ಗಣಪತಿಯು ರಕ್ತಾಂಭರದಾರಿ ಎನಿಸುವುದರಿಂದ, ಗಣಪತಿಗೆ ಅರ್ಪಿಸುವ ವಸ್ತ್ರವನ್ನು, ಕುಂಕುಮದಿಂದ ಕೆಂಪಾಗಿಸಿದ, ವಸ್ತ್ರದ್ವಯವನ್ನೇ ಅರ್ಪಿಸಬೇಕು…

೫. ಗಣಪತಿಗೆ ತುಲಸೀ ಪೂಜೆ ಮಾಡಬಾರದು, ಎಂಬ ನಿಯಮ ಇದೆ..
ಆದರೆ ವ್ರತಗಳಲ್ಲಿ ಖಂಡಿತಾ ಮಾಡಬಹುದು, ನಿಷೇಧ ಇಲ್ಲ….

೬. ವಾಯನದಾನಕ್ಕೆ ಎರಡು ತೆಂಗಿನಕಾಯಿ, ಐದು ವೀಳ್ಯದೆಲೆ, ಐದು ಅಡಿಕೆ, ಅರ್ಧ ಸೇರು ಅಕ್ಕಿ, ಹಣ್ಣು ಮತ್ತು ಭಕ್ಷ್ಯಗಳ ಜೊತೆಗೆ ಇಟ್ಟು, ಎರಡು ಬಾಳೆ ಎಲೆ ಮುಚ್ಚಿ, ಬ್ರಾಹ್ಮಣರನ್ನು ಪೂರ್ವಕ್ಕೆ ಕೂಡಿಸಿ, ದಾನಿಯು ಉತ್ತರಕ್ಕೆ ಮುಖ ಮಾಡಿ, ಸಂಕಲ್ಪ ಮಾಡಿ ದಾನ ಮಾಡಬೇಕು …

೭. ಆಚಮನವನ್ನು ಮಾಡುವಾಗ ಪ್ರತಿಯೊಂದು ಸಾರಿಯೂ ಒಂದೊಂದು ನಾಮಕ್ಕೂ, ನಮ್ಮ ದೇಹದ ವಿವಿಧ ಅಂಗವನ್ನು ಸ್ಪರ್ಶಿಸಬೇಕು.., ನಮ್ಮ ಶರೀರದ ಪ್ರತಿಯೊಂದು ಅಂಗಾಂಗದಲ್ಲೂ ಪರಮಾತ್ಮನು ನೆಲೆಸಿದ್ದಾನೆ ಎಂದು ಸೂಚಿಸುವ ಉದಾತ್ತ ತತ್ವವೇ ಆಚಮನ…
ಕೆಲವರು ವ್ರತ ಪ್ರಾರಂಭದಲ್ಲಿ ಮಾತ್ರ ಮಾಡಿ, ನಂತರ ಸುಮ್ಮನೆ ಮಂತ್ರ ಹೇಳಿಕೊಳ್ಳುತ್ತಾರೆ, ಇದು ತಪ್ಪು….

೮. ಮನೆಯಲ್ಲಿ ವ್ರತದ ದಿನ, ಹಗಲಿನಲ್ಲಿ ಮಲಗಬಾರದು, (ಅನಾರೋಗ್ಯಸ್ಥರೂ ಮತ್ತು ವಯಸ್ಸಾದವರು ಮಲಗಬಹುದು)..

೯. ಹಸೀ ಹಾಲನ್ನೇ ಪೂಜೆಗೆ ಬಳಸಬೇಕು..

೧೦. ನುಚ್ಚಿಲ್ಲದ ಅಕ್ಕಿಯಿಂದ ಅಕ್ಷತೆಯನ್ನು ಮಾಡಿಟ್ಟುಕೊಳ್ಳಿ…

೧೧. ಗಣಪತಿಗೆ..
ಬೆಲ್ಲದ ಅಚ್ಚು / ಪಂಚಕಜ್ಜಾಯ/ ಮೋದಕ/ ಲಾಡು / ಕರಿಗಡುಬು/
ನೇರಳೆಹಣ್ಣು, ಬೇಲದ ಹಣ್ಣು, ಸೀಬೆಹಣ್ಣು, ಒಣದ್ರಾಕ್ಷಿ, ಖರ್ಜೂರ, ಚಿಗಳಿ, ತೆಂಬಿಟ್ಟು, ಕಜ್ಜಾಯ, …..
…… ಇತ್ಯಾದಿ ..
ತುಂಬಾ ಇಷ್ಟ ಮತ್ತು ಶ್ರೇಷ್ಠ..!

೧೨.ಬೆಳ್ಳಿಗಣಪತಿಯನ್ನು ಮೊದಲು ನೀರಿಗೆ ಚೂರು ಗೋವು ಮೂತ್ರ ಹಾಕಿ ಶುದ್ಧ ಮಾಡಿ, ನಂತರ ಅರಿಸಿನದ ನೀರಿನಿಂದ ಶುದ್ಧ ಮಾಡಿ, ಪೂಜೆಗೆ ಇಟ್ಟುಕೊಳ್ಳಿ…

RELATED ARTICLES  ಹೆತ್ತ ತಾಯಿ ದೂರವಾಗಿ ಮನೆಯಲ್ಲಿಯೇ ಬೇರೆ ಕೋಣೆಯಲ್ಲಿ ವಾಸ್ತವ್ಯ : ಮನನೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

೧೩. ೨೧ ಗರಿಕೆಯ, ೨೧ ಕಟ್ಟುಗಳುಳ್ಳ, ಹರಿಸಿನ ಅಥವ ಗಂಧ ಹಚ್ಚಿದ ದಾರದಿಂದ, ಹಾರ ಮಾಡಿ, ಹಾಕಿದರೆ ತುಂಬಾ ವಿಶೇಷ ಫಲ..
ಸಾಧ್ಯವಾಗದವರು ೩೩ ಗರಿಕೆಗಳನ್ನು ಕೈಯಲ್ಲಿ ಹಿಡಿದು..
ಶುಕ್ಲಾಂಭರದರಂ…………………
……………..
…………..ವಿಘ್ನೋಪ ಶಾಂತಯೇ||
ಈ ಶ್ಲೋಕ ೩೩ ಸಾರಿ ಹೇಳಿ ಗಣಪತಿಗೆ ಅರ್ಪಿಸಿ, ತುಂಬಾ ವಿಶೇಷ…

೧೪. ಪತ್ರೆಗಳು :
a. ಗರಿಕೆ : ಇಷ್ಟಾರ್ಥ ಸಿದ್ಧಿ, ಪೂಜೆಯ ನಂತರ ಗರಿಕೆಯನ್ನು ಹಣವಿಡುವ ಜಾಗದಲ್ಲಿ ಇಡಿ, ಮತ್ತು 9 ಗರಿಕೆಯನ್ನು ಕುಡಿಯೋ ನೀರಿಗೆ ಹಾಕಿ…
ಶನೇಶ್ವರ ದೋಷ, ಸಾಡೇಸಾತ್ ನಡೆಯುತ್ತಿರೋರು, ಗರಿಕೆಯಿಂದ ಪೂಜೆ ಮಾಡಿ..

೨. ದವನ ಪತ್ರೆ : ಸಕಲ ಕಾರ್ಯ ಸಿದ್ಧಿ, ಕೆಲಸದಲ್ಲಿ ಯಾವ ತೊಂದರೆ ಬರದೇ, ಅಧಿಕ ಲಾಭವಾಗುತ್ತದೆ ..

೩. ಬಿಲ್ವಪತ್ರೆ : ಋಣಭಾದೆ ರೋಗಭಾದೆ ನಿವಾರಣೆಯಾಗುತ್ತದೆ ..

೪. ಶಮೀ ಪತ್ರೆ : ಸಾಡೇಸಾತ್, ಅಷ್ಟಮ, ಪಂಚಮ, ಇತ್ಯಾದಿ ಶನಿದೋಷಗಳು ನಿವಾರಣೆಯಾಗುತ್ತದೆ ..

೫. ಅರಳೀ ಪತ್ರೆ : ಸಂತಾನವಾಗದವರಿಗೆ ಸಂತಾನ ಭಾಗ್ಯ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..,

೬. ಉತ್ತರಾಣಿ ಪತ್ರೆ : ವಿದ್ಯಾರ್ಥಿಗಳಿಗೆ ಅತ್ಯಂತ ಶುಭ, ಸಕಲ ವಿದ್ಯಾ ಬುದ್ದಿ ಯೋಗ..

೭. ದರ್ಬೆ : ಸಕಲ ಕೇತು ದೋಷ, ನಕ್ಷತ್ರ ದೋಷ ನಿವಾರಣೆಯಾಗುತ್ತದೆ ..
……… ಇತ್ಯಾದಿ….

೧೭. ಹೂವುಗಳು…
ಬಿಳಿ ಎಕ್ಕದ ಹೂವು : ಸಮಸ್ತ ರೋಗ ನಿವಾರಣೆ, ಆರೋಗ್ಯ ಭಾಗ್ಯ..

ದ್ರೋಣ ಪುಷ್ಪ : ಶತ್ರು ನಾಷ ಮತ್ತು ನೆಮ್ಮದಿ..

ತುಂಬೆ ಹೂವು : ದೈವಭಲ ಜಾಸ್ತಿಯಾಗುತ್ತದೆ, ಭಕ್ತಿ ಜಾಸ್ತಿ..

ಮಲ್ಲಿಗೆ ಹೂವು : ಸಮಸ್ತವಾದ ದೈಹಿಕ ಹಾಗೂ ಮಾನಸಿಕ ರೋಗ ನಿವಾರಣೆಯಾಗುತ್ತದೆ…

ಪಾರಿಜಾತ : ಸರ್ಪದೋಷ ನಿವಾರಣೆ ಮಾಡುತ್ತೆ..

ರುದ್ರಾಕ್ಷಿ ಹೂವು : ಎಷ್ಟೇ ಕಷ್ಟ ಬಂದರು ಜಯ ನಿಮ್ಮದಾಗುತ್ತೆ..

ಕಣಗಲೆ ಹೂವು : ಭಯ ಭೀತಿ ನಿವಾರಣೆ, ಮಾಂತ್ರಿಕ ಭಾದೆ ನಿವಾರಣೆ, ಹಾಗೂ ವಿದ್ಯಾಪ್ರಾಪ್ತಿ..

ಸೂರ್ಯಕಾಂತಿ : ಅಷ್ಟೈಶ್ವರ್ಯ ಪ್ರಾಪ್ತಿ, ಉದ್ಯೋಗ ಭಾಧೆ ನಿವಾರಣೆ..
….. ಇತ್ಯಾದಿ..
( ತುಂಬಾ ಇವೆ ಬರೆಯಲು ಸಾಧ್ಯವಾದಾಗ ತಿಳಿಸುತ್ತೇನೆ)

RELATED ARTICLES  ಎದೆ ಬಡಿತ ಹೆಚ್ಚಿಸುವ ಕ್ರೀಡೆ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ.

ಹಣ್ಣುಗಳು :
ಬಾಳೆಹಣ್ಣು : ಇಷ್ಟಾರ್ಥ ಸಿದ್ಧಿ,
ಯಾಲಕ್ಕಿ ಬಾಳೆಹಣ್ಣು : ನಿಂತು ಹೋದ ಕಾರ್ಯಗಳು ಮುಂದುವರಿಯುತ್ತದೆ, ಶೀಘ್ರವಾಗಿ ನೆರವೇರುತ್ತದೆ …

ಬಾಳೆಹಣ್ಣು ರಸಾಯನ : ಸಾಲದ ಭಾದೆ ನಿವಾರಣೆ, ಬರಬೇಕಾದ ಹಣ ಬರುತ್ತದೆ,
ಶುಭ ಕಾರ್ಯಕ್ಕೆ ಬೇಕಾದ ಹಣ ಮಂಜೂರ್ ಆಗಿ ಸಿಗುತ್ತದೆ ..

ಪೂರ್ಣಫಲ/ ತೆಂಗಿನಕಾಯಿ : ಕೆಲಸ ಕಾರ್ಯಗಳು ನಿಮ್ಮ ಮನಸ್ಸಿನಂತೆಯೇ ನೆರವೇರುತ್ತದೆ.., ಬಹಳ ಸುಲಭವಾಗಿ ಆಗುತ್ತದೆ, ಸಕಲ ಕಾರ್ಯ ದಿಗ್ವಿಜಯವಾಗುತ್ತದೆ..

೫. ಅಂಜೂರ : ಆರೋಗ್ಯಭಾಗ್ಯ, B.P, ನಾರ್ಮಲ್ ಆಗುತ್ತದೆ..,

ನೇರಳೆ ಹಣ್ಣು ; ಬೆನ್ನು ನೋವು, ಮಂಡೀ ನೋವು, ಸೊಂಟದ ನೋವು ವಾಸಿಯಾಗುತ್ತದೆ, ಶನಿಕಾಟ ನಿವಾರಣೆಯಾಗುತ್ತದೆ ..

ಸೀಬೆಹಣ್ಣು : ಎಲ್ಲರಿಂದಲೂ ರಾಜಗೌರವ, ಸತ್ಕಾರ ಸಿಗುತ್ತದೆ, ಉದರವ್ಯಾಧಿ ನಿವಾರಣೆಯಾಗುತ್ತದೆ ..
ವಿವಾಹ ಭಾಗ್ಯವಾಗುತ್ತದೆ..,
ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಧಿಕ ಲಾಭವಾಗುತ್ತದೆ …
…….ಇತ್ಯಾದಿ ..

ಭಕ್ಷ್ಯಗಳು ;
ಮೋದಕ : ಇಷ್ಟಾರ್ಥ ಸಿದ್ಧಿ ಮತ್ತು ಸಾಕ್ಷಾತ್ ಗಣಪತಿಯೇ ನಮ್ಮ ಮನೆಯನ್ನು ಕಾಯುತ್ತಾನೆ.., ಜಾತಕ ದೋಷಗಳು ನಿವಾರಣೆಯಾಗುತ್ತದೆ …

ಲಾಡು : ಮನೆಯಲ್ಲಿ ಮಂಗಳ ಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ, ವಿವಾಹ ಭಾಗ್ಯವಾಗುತ್ತದೆ …

ಕರಿಗಡುಬು : ಸರ್ವರಿಗೂ ಆರೋಗ್ಯ ಭಾಗ್ಯ , ಮತ್ತು ಲಕ್ಷ್ಮೀ ಪ್ರಾಪ್ತಿ..

ಅಪ್ಪಂ ಅಥವಾ ಕಜ್ಜಾಯ : ಹಿರಿಯರ ಶಾಪ ನಿವಾರಣೆ,

ಒಬ್ಬಟ್ಟು : ಕುಜದೋಷ ನಿವಾರಣೆಯಾಗುತ್ತದೆ, ವಿವಾಹದ ದೋಷಗಳು ನಿವಾರಣೆಯಾಗುತ್ತದೆ …

ಬೆಲ್ಲದ ಅಚ್ಚು ; ಕುಲದೇವರ ಬಲ, ದಾರಿದ್ರ್ಯ ನಿವಾರಣೆ, ಇಷ್ಟಾರ್ಥ ಸಿದ್ಧಿ, ಶುಗರ್ control, ಆಗುತ್ತೆ, ಅಧಿಕ ಲಾಭವಾಗುತ್ತೆ, ಅಪಮೃತ್ಯು ನಿವಾರಣೆಯಾಗುತ್ತದೆ ..

ಪಂಚಕಜ್ಜಾಯ : ಸಕಲ ಗ್ರಹ ಕಾಟ ನಿವಾರಣೆ, ಉದ್ಯೋಗ ಭಾಗ್ಯ,
ಇಷ್ಟಾರ್ಥ ಸಿದ್ಧಿ,
ಶನಿ ದೋಷ, ರಾಹು ದೋಷ ನಿವಾರಣೆ, .. ಸರ್ವತಾ ಅಭಿವೃದ್ಧಿ..
….

ಚಿಗಳಿ : ಮನೆಯಲ್ಲಿ ಸ್ತ್ರೀಯರ ಸಮಸ್ಯೆಗಳು ದೂರವಾಗುತ್ತವೆ, ಮುಟ್ಟಿನ ದೋಷಗಳು ನಿವಾರಣೆಯಾಗುತ್ತದೆ..

ಸಜ್ಜಿಗೆ : ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ, ಶುಭಸಮಾಚಾರ ಕೇಳಿ ಬರುತ್ತದೆ.

ಚಕ್ಕುಲಿ : ವ್ಯಾಪಾರಿಗಳಿಗೆ ಅಧಿಕವಾದ ವ್ಯಾಪಾರವಾಗಿ ಧನಲಾಭವಾಗುತ್ತದೆ.., ಕಬ್ಬಿಣಕ್ಕೆ ಸಂಭಂದಿಸಿದ ವ್ಯಾಪಾರಸ್ಥರಿಗೆ ಅತ್ಯತ್ತಮವಾಗಿರುತ್ತದೆ.