ಭಟ್ಕಳ : ಸ್ಪಂದನ ಸಂಸ್ಥೆಯಿಂದ ಎಫ್.ಡಿ.ಎ ಮತ್ತು ಎಸ್.ಡಿ.ಎ. ಪರೀಕ್ಷೆಗಳಿಗೆ ಹಾಜರಾಗುವ ಪರೀಕ್ಷಾರ್ಥಿಗಳಿಗೆ ಪ್ರತಿ ಶನಿವಾರ ಮತ್ತು ರವಿವಾರ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳು ನಡೆಯುತ್ತದೆ. ತರಗತಿಗಳು ಇಲ್ಲಿನ ಸಾಗರ ರಸ್ತೆಯಲ್ಲಿರುವ ಹೆಸ್ಕಾಮ್ ಇಲಾಖೆಯ ಸಭಾಂಗಣದಲ್ಲಿ ಪ್ರತಿ ಶನಿವಾರ ಮದ್ಯಾಹ್ನ 2 ರಿಂದ ಸಾಯಂಕಾಲ 5 ಗಂಟೆಯ ವರೆಗೆ ಮತ್ತು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ತರಗತಿಗಳು ನಡೆಯಲಿದೆ.

ಇದೇ ಬರುವ 14-3-2020ರ ಶನಿವಾರ ಕನ್ನಡ ವಿಷಯಕ್ಕೆ ಸಂಬಂಧಿಸಿದ ತರಗತಿಯನ್ನು ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಗೌಡ ನಡೆಸಿಕೊಡಲಿದ್ದಾರೆ. ಹಾಗೆಯೇ 15-3-2020ರ ರವಿವಾರದ ತರಗತಿಯಲ್ಲಿ ಪ್ರಚಲಿತ ವಿದ್ಯಮಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಅಂಕೋಲಾದ ಶ್ರೀ ರಾಮ್ ಸ್ಟಡಿ ಸರ್ಕಲನ ಸೂರಜ ನಾಯಕ ಹಾಗೂ ಅವರ ತಂಡ ನಡೆಸಿಕೊಡಲಿದ್ದಾರೆ. ಇದೇ ರೀತಿಯಲ್ಲಿ ಪ್ರತಿ ವಾರಾಂತ್ಯದ ತರಗತಿಗಳು ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ನಡೆಯಲಿದ್ದು ಪರೀಕ್ಷಾರ್ಥಿಗಳಿಗೆ ಪರೀಕ್ಷೆಯ ಪೂರ್ವ ಸಿದ್ಧತೆಗಳಿಗೆ ಸಂಬಂಧಿಸಿದಂತೆ ವಿಶೇಷ ಮಾರ್ಗದರ್ಶನ, ಅಧ್ಯಯನ ಸಾಮಗ್ರಿಗಳು ಹಾಗೂ ಪೂರ್ವಭಾವಿ ಪರೀಕ್ಷೆಗಳ ಮುಲಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಎದುರಿಸುವ ಕುರಿತು ಮಾರ್ಗದರ್ಶನವನ್ನು ನೀಡಲಾಗುವುದು.

RELATED ARTICLES  ಹಾಲಕ್ಕಿ ಸಮಾಜದವರಿಗಾಗಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಾರಣ ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸಿರುವ ಪರೀಕ್ಷಾರ್ಥಿಗಳು ಈ ತರಗತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ 9620111625 ಹಾಗೂ ಶಿವಾನಂದ ನಾಯ್ಕ 6361273142 ಇವರನ್ನು ಸಂಪರ್ಕಿಸಬಹುದೆಂದು ಸಂಘಟಕರು ಕೋರಿದ್ದಾರೆ.

RELATED ARTICLES  ರಾಷ್ಟ್ರೀಕೃತ ಬ್ಯಾಂಕುಗಳ ಪರೀಕ್ಷೆಯನ್ನೂ ಕನ್ನಡದಲ್ಲಿ ಬರೆಯಬಹುದು.