ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಕವಲಕ್ಕಿಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ ನ ಅಧ್ಯಕ್ಷರಾದ ಶ್ರೀ ಉಮೇಶ ವಿ ಹೆಗಡೆ ಅಬ್ಳಿ ಇವರು ಮತ್ತು ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ವೈಲೆಟ್ ಕೆ ಫರ್ನಾಂಡಿಸ್ ರವರು ಉಪಸ್ಥಿತರಿದ್ದರು.
ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ ನ ಅಧ್ಯಕ್ಷರಾದ ಶ್ರೀ ಉಮೇಶ ವಿ ಹೆಗಡೆ ಅಬ್ಳಿ ಇವರು ಮಾತನಾಡಿ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗುವುದರ ಜೊತೆಗೆ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕೆಂದು ತಿಳಿಸಿದರು.
ಸಹ ಶಿಕ್ಷಕಿಯಾದ ಶ್ರೀಮತಿ ಮಾನಸಾ ಹೆಗಡೆಯವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ಮತ್ತು ವಿದ್ಯಾರ್ಥಿನಿಯಾದ ಕುಮಾರಿ ನಿಸರ್ಗ ಗೌಡ ಇವಳು ಶಾಲೆಯ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದಳು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ನೆನಪಿನ ಕಾಣಿಕೆಯನ್ನು ನೀಡಿದರು. ಸಹ ಶಿಕ್ಷಕರಾದ ಶ್ರೀಮತಿ ಪ್ರತಿಮಾ ಹೆಗಡೆ ಸ್ವಾಗತಿಸಿದರು ಮತ್ತು ಕುಮಾರಿ ಪ್ರಿಯಾಂಕಾ ಸಾಲೆಹಿತ್ತಲ ನಿರೂಪಿಸಿದರು, ಕುಮಾರಿ ಐಶ್ವರ್ಯ ಹೊನ್ನಾವರ ವಂದಿಸಿದರು.