ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯ ಕೊನೆಯ ದಿನಗಳಲ್ಲಿ, ಕೊರೋನಾ ಕಾಟದಿಂದಾಗಿ ಜಾತ್ರೆಯಲ್ಲಿ ಲಕ್ಷಾಂತರ ದುಡ್ಡು ಸುರಿದು ವ್ಯಾಪಾರ ನಡೆಸುತ್ತಿರುವ ರಸ್ಥೆ ಪಕ್ಕದ ಅಂಗಡಿಗಳನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದೆ.
ನಿನ್ನೆ ರಾತ್ರಿ 12 ಘಂಟೆಯ ನಂತರ ಅಂಗಡಿಮುಂಗಟ್ಟುಗಳನ್ನು ತೆರವುಗೊಳಿಸಲು ಸೂಚಿಸಲಾಗಿದ್ದು, ವ್ಯಾಪಾರವಿಲ್ಲದೇ ಸೊರಗಿದ್ದ ವ್ಯಾಪಾರಸ್ಥರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಇಂದಿನಿಂದ ನಾಟಕ ಕಂಪನಿಗಳಿಗೆ ಪ್ರದರ್ಶನ ನೀಡದಂತೆ ಸೂಚಿಸಲಾಗಿದೆ. ಹಾಗೆಯೇ ನಾಳೆ ಅಮ್ಯೂಸ್‌ಮೆಂಟ್ ಪಾರ್ಕಗಳನ್ನು ತೆರವುಗೊಳಿಸಲು ಆದೇಶ ಹೊರ ಬೀಳುವ ಸಾಧ್ಯತೆಯಿದೆ.
ಕೊರೋನಾ ವೈರಸ್ ಮುನ್ನೆಚ್ಚರಿಕೆ ಕಾರಣದಿಂದ ಈ ಆದೇಶ ಹೊರಡಿಸಲಾಗಿದೆ.
ಆದರೆ ವ್ಯಾಪಾರವೇ ಇಲ್ಲದೆ ಸೊರಗಿರುವವರು ತಮ್ಮ ದುಖಃ ನಮ್ಮೊಂದಿಂಗೆ ಹಂಚಿಕೊಂಡರು. ಇನ್ನೆರಡು ದಿನಕಾಲಾವಕಾಶ ಸಿಲ್ಕಿದ್ದರೆ ಹಾಕಿದ ಅಸಲು ಬರುತ್ತಿತ್ತು ಎನ್ನುವುದು, ಕೆಲವರ ಅಂಬೋಣ.
ಜನ ಜಾಗ್ರತಿಗೊಂಡು ಮಾರಕ ವೈರಸ್ ನಿಂದ ಸ್ವಯಂ ರಕ್ಷಣೆ ಪಡೆಯಬೇಕೆನ್ನುವುದು ಅಷ್ಟೇ ಸತ್ಯವಾಗಿದ್ದು. ಒಟ್ಟಿನಲ್ಲಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆ ಕೊನೆಯದಿನಗಳಲ್ಲಿ ನೀರಸ ಮುಕ್ತಾಯಗೊಳ್ಳುವ ನಿರೀಕ್ಷೆ ಕಂಡುಬಂದಿದೆ.