ಗೋಕರ್ಣ: ಇಲ್ಲಿನ ತಾರಮಕ್ಕಿಯಿಂದ ಆಚಾರಿ ಕಟ್ಟೆಯವರೆಗೆ ಹಾಗೂ ಆಚಾರಿ ಕಟ್ಟೆಯಿಂದ ಮುಖ್ಯ ರಸ್ತೆಯವರೆಗೆ ಒಟ್ಟು ಸಿ.ಸಿ ರಸ್ತೆ ನಿರ್ಮಾಣ ಅಭಿವೃದ್ಧಿ ಕಾರ್ಯಕ್ಕೆ ಕುಮಟಾ ಶಾಸಕ ದಿನಕರ ಶೆಟ್ಟಿ ಶನಿವಾರ ಚಾಲನೆ ನೀಡಿದರು.
2019-20ನೇ ಸಾಲಿನ ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆ ಯೋಜನೆ ಅಡಿ ಎರಡೂ ಪ್ರತ್ಯೇಕ ಕಾಮಗಾರಿಯಾಗಿದ್ದು, ಒಟ್ಟು ₹2.50 ಕೋಟಿ ಅಂದಾಜು ಮೊತ್ತದ ಕಾಮಗಾರಿ ಇದಾಗಿದೆ. ಎನ್.ಆರ್.ನಾಯಕ, ಹನೇಹಳ್ಳಿ ಹಾಗೂ ರವಿ ವಿಠೋಬಾ ನಾಯಕ, ಮೊರಬಾ ಗುತ್ತಿಗೆದಾರರು ಎಂದು ತಿಳಿಸಿದರು.
ನಿಗದಿತ ಅವಧಿಯೊಳಗೆ, ಗುಣಮಟ್ಟದ ಕಾಮಗಾರಿಯೊಂದಿಗೆ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.