ಕುಮಟಾ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಕುಮಟಾ ವೈದ್ಯಕೀಯ ಸಂಘದ ವತಿಯಿಂದ ಪಟ್ಟಣದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಮಹಿಳಾ ರಕ್ಷಣೆಯ ಕುರಿತು ಪ್ರದರ್ಶನಗೊಂಡ ನೃತ್ಯ ರೂಪಕ ಸಾರ್ವಜನಿಕರ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.

ಈ ನೃತ್ಯ ರೂಪಕದಲ್ಲಿ ಹೆಣ್ಣುಮಕ್ಕಳು ಹುಟ್ಟಿದಾಗಿನಿಂದ ವಯಸ್ಕರಾಗುವರೆಗೆ ಅನುಭವಿಸುವ ವಿವಿಧ ರೀತಿಯ ಕಷ್ಟಗಳು ಸೇರಿದಂತೆ ಅವಳ ಮೇಲಾಗುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಲಾಯಿತು. ಪ್ರದರ್ಶನಗೊಂಡ ಐದು ನೃತ್ಯ ರೂಪಕದಲ್ಲಿ ಹೆಣ್ಣಿನ ಜೀವನದ ಸಂಪೂರ್ಣ ಚಿತ್ರಣ ಒಳಗೊಂಡಿದ್ದು, ಮೊದಲ ನೃತ್ಯ ರೂಪಕದಲ್ಲಿ ಹೆಣ್ಣಿನ ಮೇಲಾಗುವ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದರೆ, ಎರಡನೇ ನೃತ್ಯ ರೂಪಕದದಲ್ಲಿ ಹೆಣ್ಮು ವಿವಾಹವಾದ ಬಳಿಕ ಪತಿಯ ಮನೆಯಲ್ಲಿ ಅನುಭವಿಸುವ ವೇಧನೆಯನ್ನು ತಿಳಿಸುತ್ತದೆ. ಮೂರನೇ ನೃತ್ಯ ರೂಪಕದಲ್ಲಿ ಪತಿ ತನ್ನ ಪತ್ನಿ ಮತ್ತು ಹೆಣ್ಣು ಮಗುವನ್ನು ಶೋಷಿಸುವ ದೃಶ್ಯ ಕಂಡುಬಂದರೆ, ನಾಲ್ಕನೇ ನೃತ್ಯ ರೂಪಕ ಕಷ್ಟಪಟ್ಟು ಜೀವನದಲ್ಲಿ ಸಾಧನೆ ಮಾಡಿದ ಹೆಣ್ಣು ತನ್ನ ತಂದೆ, ತಾಯಿಯನ್ನು ಉತ್ತಮವಾಗಿ ನೋಡಿಕೊಳ್ಳುವ ಪರಿ ಮತ್ತು ಐದನೇ ನೃತ್ಯ ರೂಪಕದದಲ್ಲಿ ಹೆಣ್ಣು-ಗಂಡು ಆಧುನಿಕ ಸಮಾಜದಲ್ಲಿ ಸಮಾನವಾಗಿ ಬದುಕು ಸಾಗಿಸುವ ಜೊತೆಗೆ ಮಹಿಳೆ ಆತ್ಮರಕ್ಷಣೆ ಕಲೆಯನ್ನು ಕಲಿಯುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಇದರಿಂದ ಮಹಿಳೆಯರಲ್ಲಿ ಹೊಸ ಆತ್ಮವಿಶ್ವಾಸ ಮೂಡುವಂತಾಗಿದೆ.

RELATED ARTICLES  ಸರ್ಕಾರಿ ಆಸ್ಪತ್ರೆಗೆ 1 ಲಕ್ಷ ರೂ. ಮೌಲ್ಯದ ಅಗತ್ಯ ವೈದ್ಯಕೀಯ ಸಲಕರಣೆ ಕೊಡುಗೆ.

ಒಟ್ಟಾರೆ ಅಂತಿಮವಾಗಿ ಹೆಣ್ಣು ಇಡೀ ಸಮಾಜದ ಕಣ್ಣಿದ್ದಂತೆ. ಅವಳು ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ ಹೀಗೆ ಕುಟುಂಬದದಲ್ಲಿ ವಿವಿಧ ಹಂತದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯಾಗಿ ಹೊರಹೊಮ್ಮುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಬದುಕುವ ಚಿತ್ರಣ ನೆರೆದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೇ ಕಾರ್ಯಕ್ರಮದ ಕೊನೆಯಲ್ಲಿ ಕೊರೋನಾ ವೈರಸ್ ತಡೆಗಟ್ಟುವ ಕುರಿತು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮದ ಕುರಿತು ಜಾಗೃತಿ ಮೂಡಿಸಲಾಯಿತು.

RELATED ARTICLES  ಪರವಾನಿಗೆ ಇಲ್ಲದೆ ಗೋ ಸಾಗಾಟ ಯತ್ನ ತಡೆದ ಕಾರ್ಯಕರ್ತರು