ಹೊನ್ನಾವರ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ೨೦೧೮-೧೯ ನೇ ಶೈಕ್ಷಣಿಕ ಸಾಲಿನ ಕಲಾ ವಿಭಾಗದ ರ್‍ಯಾಂಕ್ ಘೋಷಣೆಯಗಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮಹಾವಿದ್ಯಾಲಯ ಹೊನ್ನಾವರದ ಬಿ.ಎ. ಅಂತಿಮ ವರ್ಷದಲ್ಲಿ ತೇರ್ಗಡೆಯಾದ ಕುಮಾರಿ ಸಂಗೀತಾ ಲಕ್ಷ್ಮಣ ನಾಯ್ಕ, ಒಂಬತ್ತನೇ ರ್‍ಯಾಂಕ್ ಪಡೆದು ಕಾಲೇಜಿಗೆ ಹಾಗೂ ಹೊನ್ನಾವರಕ್ಕೆ ಕೀರ್ತಿ ತಂದಿರುತ್ತಾರೆ.
ಸಧ್ಯ ಈಕೆಯು ಧಾರವಾಡದಲ್ಲಿ ಎಂ.ಎ. ಮ್ಯೂಸಿಕ್ ಉನ್ನತ ಶಿಕ್ಷಣ ಪಡೆಯುತ್ತಿದ್ದಾಳೆ. ಸಂಗಿತ ಕ್ಷೇತ್ರದಲ್ಲಿ ಈಗಾಗಲೇ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಎರಡು ಬಾರಿ ಪ್ರಥಮ ಸ್ಥಾನ ಪಡೆದು ಅಂತರ್ ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುತ್ತಾರೆ.