ಭಟ್ಕಳ: 2020-21ನೇ ಸಾಲಿಗೆ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ಇಂದಿರಾ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯ್ ವಸತಿ ಶಾಲೆಗಳಿಗೆ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್‍ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದ್ದು 5ನೇ ತರಗತಿಯಲ್ಲಿ ಓದುತ್ತಿರುವ ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯ ಅರ್ಜಿಯನ್ನು ಸಲ್ಲಿಸ ಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

RELATED ARTICLES  ಭಂಡಾರಿ ಸಮಾಜವು ಕಲ್ಪವೃಕ್ಷದಂತೆ ಪರೋಪಕಾರಿಯಾಗಿ ಅಭಿವೃದ್ಧಿ ಹೊಂದಬೇಕು : ಕೇಶವ ಡಿ. ಪೆಡ್ನೇಕರ್.

ಅರ್ಜಿ ಸಲ್ಲಿಸಲು ಬರುವಾಗ ವಿದ್ಯಾರ್ಥಿಯು ಓದುತ್ತಿರುವ ಶಾಲೆಯ ಸ್ಯಾಟ್ಸ್(ಎಸ್‍ಎಟಿಎಸ್) ವಿದ್ಯಾರ್ಥಿ ಮಾಹಿತಿ (ಜಾತಿ, ಉಪ ಜಾತಿ)ಯನ್ನು ಕಡ್ಡಾಯವಾಗಿ ಅಪ್‍ಡೇಟ್ ಆಗಿರಬೇಕು, ವಿದ್ಯಾರ್ಥಿ ಸ್ಟಾಟ್ಸ್ ನಂಬರ್‍ನೊಂದಿಗೆ ಶಾಲಾ ದೃಢೀಕರಣ ಪತ್ರ, ಚಾಲ್ತಿಯಲ್ಲಿರುವ ವಿದ್ಯಾರ್ಥಿಯ ಆರ್.ಡಿ.ನಂಬರ್ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಮೊಬೈಲ್ ನಂಬರ್, ವಿದ್ಯಾರ್ಥಿಯ ಇತ್ತೀಚಿನ 2 ಪೋಟೋಗಳೊಂದಿಗೆ ಸಮೀಪದ ಯಾವುದೇ ವಸತಿ ಶಾಲೆಗೆ ಬಂದು ಮಾ.12 ರಿಂದ ಎ.03ರ ತನಕ ಶಾಲಾ ಕಛೇರಿಯ ಅವಧಿಯಲ್ಲಿ ಅರ್ಜಿಸಲ್ಲಿಸ ಬಹುದಾಗಿದೆ. ಪ್ರವೇಶ ಪರೀಕ್ಷೆಯು ಮೇ.06ರಂದು ಬುಧವಾರ ನಡೆಯಲಿದ್ದು 4 ಮತ್ತು 5ನೇ ತರಗತಿಯ ಪಠ್ಯದ ಮೇಲೆ 100 ಅಂಕದ ಪರೀಕ್ಷೆ ನಡೆಯುತ್ತದೆ ಎಂದು ಭಟ್ಕಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಕೋರಿದ್ದಾರೆ.

RELATED ARTICLES  ಕಾರಿನಲ್ಲಿ ಬಂದ ಮೂವರಿಂದ ಯುವತಿಯ ಕಿಡ್ನಾಪ್..? ದಾಖಲಾಗಿದೆ ಪ್ರಕರಣ