ಶಿರಸಿ : Covid-19 (ಕರೋನಾ) ಕಾರಣದಿಂದ ಜಾಗೃತಿ ಭಾಗವಾಗಿ ಸರ್ಕಾರದ ಕಟ್ಟುವ ನಿಟ್ಟಿನ ಆದೇಶದಂತೆ ಜಾತ್ರಾ ಅಂಗಡಿಗಳು, ನಾಟಕ ,ಸರ್ಕಸ್,ಅಮ್ಯೂಸ್ ಮೆಂಟ್ ಗಳು ಮುಚ್ಚಲಾಗಿದೆ ಇದರಿಂದ ಇವೆಲ್ಲದರ ಮಾಲಿಕರು ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಹಾಗೆ ಅಲ್ಲಿ ಕೆಲಸ ಮಾಡುವವರಿಗೂ ವ್ಯಾಪಾರಸ್ಥರಿಗೂ ಊಟಕ್ಕೂ ಸಮಸ್ಯೆಯಾಗಿದ್ದು ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದರಿಂದ ತಕ್ಷಣದ ನೆರವಿಗಾಗಿ ಇವರಿಗೆ ದೇವಸ್ಥಾನದ ವತಿಯಿಂದ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ 12 ರಿಂದ 3 ಮತ್ತು ಸಂಜೆ 7 ರಿಂದ 9 ಘಂಟೆಗೆ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಇರುತ್ತದೆ.
ಇದಕ್ಕಾಗಿ ಅಂಗಡಿಕಾರರು, ನಾಟಕ ಮಂಡಳಿಯವರು, ಸರ್ಕಸ್ ಕಂಪನಿಯವರು, ಅಮ್ಯೂಸ್ ಮೆಂಟ್ ನ ಮಾಲಿಕರು ತಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ಎಷ್ಟು ಊಟದ ಅಗತ್ಯ ಇದೆ ಎನ್ನುವುದನ್ನು ದೇವಸ್ಥಾನದ ಕಛೇರಿಗೆ ತಿಳಿಸಿ ಅಷ್ಟು ಟೋಕನ್ ಪಡೆದು ಊಟ ಮಾಡಬಹುದೆಂದು ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿಯ ಸಾಮಾಜಿಕ ಜಾಲತಾಣದ ಮೂಲಕ ತಿಳಿದು ಬಂದಿದೆ.