ಕುಮಟಾ: ಇಲ್ಲಿನ ಎಪಿಎಮ್‍ಸಿ ಆವಾರದಲ್ಲಿ ಅಡಕೆ ವ್ಯಾಪಾರಸ್ಥರು ಹಾಗೂ ದಲಾಲರ ವರ್ಷಾಂತ್ಯ ಲೇವಾದೇವಿ ಲೆಕ್ಕಾಚಾರ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಮಾ. 21 ರಿಂದ ಏಪ್ರಿಲ್ 5 ರವರೆಗೆ ಅಡಕೆ ವ್ಯಾಪಾರ ನಡೆಸಲಾಗುವುದಿಲ್ಲ. ಅಡಕೆ ಬೆಳೆಗಾರರು ಸಹಕರಿಸಬೇಕು ಎಂದು ಅಡಕೆ ದಲಾಲರ ಸಂಘದ ಗೌರವಾಧ್ಯಕ್ಷ ಆರ್.ಜಿ.ಭಟ್ಟ, ಕಾರ್ಯಾಧ್ಯಕ್ಷ ಪ್ರಕಾಶ ಶಂಕರ ಭಟ್ಟ, ಅಡಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುರಲೀಧರ ವೈ. ಪ್ರಭು, ಉಪಾಧ್ಯಕ್ಷ ಪ್ರಭಾಕರ ಬಾಳಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.