ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ 1955 ನೇ ಇಸವಿಯಿಂದ ಮಾನ್ಯ ಉತ್ತರ ಕನ್ನಡ ಜಿಲ್ಲಾ ನ್ಯಾಯಾಧೀಶರ ಆಡಳಿತ ನಿಯಂತ್ರಣದಲ್ಲಿ ದೇವಸ್ಥಾನದ ಆಡಳಿತ ನಡೆಯುತ್ತಿದೆ. ಮಾನ್ಯ ನ್ಯಾಯಾಧೀಶರಿಂದ ಆಯ್ಕೆಯಾದ ಐದು ಜನರ ಧರ್ಮದರ್ಶಿ ಮಂಡಳಿ ದೇವಸ್ಥಾನವನ್ನು ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ದೇವಸ್ಥಾನದ ಆದಾಯದ ಮೇಲೆ ಕಣ್ಣಿಟ್ಟಿರುವ ಸರ್ಕಾರ, ದೇವಸ್ಥಾನವನ್ನು ಮುಜರಾಯಿ ಇಲಾಖೆ (ಧರ್ಮದತ್ತಿ ಇಲಾಖೆ) ಗೆ ಸೇರಿಸಿ ಒಂಬತ್ತು ಜನ ವ್ಯವಸ್ಥಾಪನಾ ಸಮಿತಿ ರಚಿಸಲು ನಿರ್ಧರಿಸಿದೆ.
ಇದು ಖಂಡನಾರ್ಹವಾಗಿದ್ದು, ಶ್ರೀ ಮಾರಿಕಾಂಬಾ ದೇವಿಯ ತಲೆತಲಾಂತರದಿಂದ ನಡೆದುಬರುತ್ತಿರುವ ಸಂಪ್ರದಾಯಗಳಿಗೆ ಧಕ್ಕೆಯಾಗಲಿದ್ದು, ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸಲು ಇದೇ 17 ಮಾರ್ಚ್ ಮಂಗಳವಾರ ಬೆಳಿಗ್ಗೆ 11.00 ಘಂಟೆಗೆ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು.
ಈ ಕಾರಣ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ವ್ಯವಸ್ಥೆಯು ಈ ಮೊದಲಿನಂತೆಯೇ ನಡೆಯಬೇಕೆಂದು ಒತ್ತಾಯಿಸಲು ಹಾಗೂ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ಸಲುವಾಗಿ ಶ್ರೀ ಮಾರಿಕಾಂಬಾ ದೇವಾಲಯದ ಬಾಬುದಾರರು ಸಾರ್ವಜನಿಕರಲ್ಲಿ ಮನವಿ ಪತ್ರ ಸಲ್ಲಿಸಲು ಪಾಲ್ಗೊಳ್ಳುವಂತೆ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.
ದಿನಾಂಕ: 17 ಮಾರ್ಚ್ ಮಂಗಳವಾರ ಬೆಳಿಗ್ಗೆ 11.00 ಘಂಟೆಗೆ
ಮನವಿ ಕೊಡುವ ಸ್ಥಳ: ಎ.ಸಿ ಆಪೀಸ್ ಶಿರಸಿ. (A.C. Office, Sirsi)
Source: Face Book