ಕುಮಟಾ: ತಾಲೂಕಿನಲ್ಲಿ ಎರಡು ಪ್ರಕರಣಗಳು ಕರೋನಾ ವೈರಸ್ ಎಂಬ ಬಗ್ಗೆ ಅನೇಕ ಸುದ್ದಿಗಳು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಮೆಸೇಜ್ ಗಳು ಹರಿದಾಡುತ್ತಿದ್ದು ಅದರ ಸತ್ಯಾಸತ್ಯತೆ ತಿಳಿಯದೆ ಜನತೆ ಭಯ ಪಡುವಂತಾಗಿದೆ. ಆದರೆ ಸತ್ಯತೆ ತಿಳಿದರೆ ಭಯ ಪಡುವ ಅಗತ್ಯ ಇಲ್ಲ ಎನ್ನಲಾಗಿದೆ.
ಇಂದು ಧಾರೇಶ್ವರದ ಮಸಾಜ ಪಾರ್ಲರ್ ನಿಂದ ಒಂದು ವಿದೇಶಿ ಮಹಿಳೆಯನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ನಿಜ ಆದರೆ ಅವಳು ಅಸ್ತಮಾ ಖಾಯಿಲೆಯಿಂದ ಬಳಲುತ್ತಿರುವ ಮಹಿಳೆ ಹಾಗಾಗಿ ಅವಳು ಪಂಚ ಕರ್ಮ ತೈಲ ಮಸಾಜ ಮಾಡಿಸಿಕೊಳ್ಳು ಬಂದ ಮಹಿಳೆ ಎನ್ನಲಾಗಿದೆ.
ಅವಳಿಗೆ ಇಂದು ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಅವಳಿಗೆ ಹೆಚ್ಚಿನ ಚಿಕಿತ್ಸೆ ಪಡೆಸಲು ಆಸ್ಪತ್ರೆಗೆ ಸೇರಿಸಲಾಯಿತು. ಹಾಗೂ ಅವಳ ಉನ್ನತ ಚಿಕಿತ್ಸೆಗೆಂದು ಕಾರವಾರಕ್ಕೆ ರವಾನಿಸಲಾಗಿದೆ. ಇದನ್ನೇ ಕರೋನಾ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಮನ ಬಂದಂತೆ ಹರಿದಾಡಿಸಲಾಗಿದೆ. ಇದು ಜಿಲ್ಲಾಡಳಿತದ ಕೆಂಗಣ್ಣಿಗೂ ಗುರಿಯಾಗಿದೆ.
ಇದರ ಜೊತೆಗೆ ಇನ್ನೊಂದು ಪ್ರಕರಣ ಕುಮಟಾದ್ದೇ ಎಂದು ಜನ ಕಂಗಾಲಾಗಿದ್ದಾರೆ. ಆದರೆ ಈವರೆಗೆ ಯಾರಿಗೂ ಕುಮಟಾದಲ್ಲಿ ಕರೋನಾ ಇರುವ ಬಗ್ಗೆ ದೃಡಪಟ್ಟ ವರದಿಗಳು ಬಂದಿಲ್ಲ. ಕರೋನಾ ಕುರಿತಾಗಿ ಶಂಕಿತರು ಎಂಬ ಬಗ್ಗೆ ವರದಿಗಳಾಗಿವೆ. ಹಾಗಾಗಿ ಕುಮಟಾದ ಜನತೆ ಭಯ ಪಡುವ ಅಗತ್ಯವಿಲ್ಲ. ಕಾಳಜಿ ವಹಿಸಿ ಹಾಗೂ ಊಹಾಪೋಹದ ಸುದ್ದಿಗಳಿಗೆ ಕಿವಿಗೊಡದಿರುವಂತೆ ಕಳಕಳಿಯಿಂದ ಈ ವರದಿ ಮಾಡಿದೆ.
ಕರೋನಾ ಬಗ್ಗೆ ಈಗಾಗಾಗಲೇ ಎಲ್ಲೆಡೆ ತಪಾಸಣೆ ನಡೆಸುತ್ತಿದ್ದು ಜನತೆ ತೀವ್ರ ಭಯಪಡುವ ಅಗತ್ಯ ವಿಲ್ಲ ಹಾಗೂ ವೈರಸ್ ಸೊಂಕು ದ್ರಡಪಟ್ಟರೆ ವೈದ್ಯಾಧಿಕಾರಿಗಳು ಅದನ್ನು ಮಾಧ್ಯಮದ ಮೂಲಕ ಹೇಳಬಹುದು. ಯಾವುದೇ ವರದಿಗಳಿಲ್ಲದೆ ಜನತೆ ಸಾಮಾಜಿಕ ಜಾಲತಾಣಗಳನ್ನು ನಂಬಿ ಗೊಂದಲ ಮಾಡಿಕೊಳ್ಳಬಾರದೆಂದು ಎಂದು ವೈದ್ಯಕೀಯ ಕ್ಷೇತ್ರದ ಪ್ರಮುಖರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಬಗ್ಗೆ ಸುಳ್ಳು ವದಂತಿ ಹರಡಿಸಿದರೆ ಅಂಥವ ವಿರುದ್ಧ ಜಿಲ್ಲಾಡಳಿತ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಡಿಸಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.