ಕುಮಟಾ: ತಾಲೂಕಿನಲ್ಲಿ ನಾಳೆ ಬುಧವಾರ ನಡೆಯಲಿದ್ದ ವಾರದ ಸಂತೆಯನ್ನು ಕೊರೋನಾ ತಡೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದನ್ವಯ ರದ್ದು ಮಾಡಲಾಗಿದೆ.
ಅಲ್ಲದೆ ಮಿರ್ಜಾನ್, ಗೋಕರ್ಣ ಹಾಗೂ ಅಂಕೋಲಾ ಉಪವಿಭಾಗಾದ್ಯಂತ ನಡೆಯುವ ಸಂತೆಗಳನ್ನು ಮುಂದಿನ ಆದೇಶದ ವರೆಗೂ ರದ್ದು ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಎಂ ಅಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.