ಕುಮಟಾ : ದಿನಾಂಕ:16-03-2020 ರಂದು ನಿವೃತ್ತ ಸರಕಾರಿ ನೌಕರರ ಸಂಘ ಕುಮಟಾ ಸಂಘದ ಕಚೇರಿಯಲ್ಲಿ 2020 ರಿಂದ ಮುಂದಿನ 5 ವರ್ಷದ ಅವಧಿಗೆ ಉತ್ತರ ಕನ್ನಡ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಆರ್.ಜೆ. ಜೋಷಿ ಇವರ ಉಪಸ್ಥಿತಿಯಲ್ಲಿ ಕುಮಟಾ ತಾಲೂಕಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು : ಶ್ರೀ ಎಸ್.ಐ. ನಾಯ್ಕ, ಉಪಾಧ್ಯಕ್ಷರು : ಶ್ರೀ ಎಮ್.ಎಸ್. ನಾಯ್ಕ ಹಾಗೂ ಸಿ.ಎಮ್.ಪಟಗಾರ, ಕಾರ್ಯದರ್ಶಿ : ಶ್ರೀ ವಿ.ಪಿ.ಭಟ್, ಖಜಾಂಚಿ : ಶ್ರೀ ಎನ್.ಜಿ. ವೈದ್ಯ, ಜಂಟಿ ಕಾರ್ಯದರ್ಶಿ : ಶ್ರೀ ಕೆ.ಎಚ್.ತಾಂಡೇಲ ಹಾಗೂ ಎಮ್.ಎನ್.ನಾಯ್ಕ, ಸಂಘಟನಾ ಕಾರ್ಯದರ್ಶಿ : ಶ್ರೀ ಎಂ.ಸಿ.ನಾಯ್ಕ ಹಾಗೂ ಡಿ.ಆರ್.ಶೇಟ, ಸಾಂಸ್ಕøತಿಕ ಕಾರ್ಯದರ್ಶಿ : ಶ್ರೀ ಎಮ್.ಟಿ. ನಾಯ್ಕ ಹಾಗೂ ಶ್ರೀ ಉಲ್ಲಾಸ ಎಚ್. ನಾಯ್ಕ, ಕ್ರೀಡಾ ಕಾರ್ಯದರ್ಶಿ : ಶ್ರೀ ಜಟ್ಟಪ್ಪ ಆರ್. ನಾಯ್ಕ, ಆಂತರಿಕ ಲೆಕ್ಕ ಪರಿಶೋಧಕರು : ಶ್ರೀ ಜಿ.ಎಲ್.ನಾಯ್ಕ ಇವರುಗಳು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ. ಹಿರಿಯರಾದ ಶ್ರೀ ಎಸ್.ಕೆ.ಹೆಗಡೆ, ಎಸ್.ಕೆ.ಪಾಲೇಕರ್, ಎಸ್.ಬಿ.ನಾಯ್ಕ, ಎಸ್.ಎಚ್.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.