ಕುಮಟಾ: ತಾಲೂಕಿನ ಶ್ರೀ ರಾಮನಾಥ ಪ್ರೌಢಶಾಲೆ, ಊರಕೇರಿಯ 8ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ಪ್ರಜ್ಞಾ ವಿ.ನಾಯ್ಕ ಹಾಗೂ ಪ್ರೇರಣಾ ಯು. ಪಟಗಾರ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರದ ಶಿಷ್ಯವೇತನಕ್ಕೆ ಭಾಜನರಾಗಿದ್ದಾರೆ. ಮಾಸಿಕ 1000ರೂ ನಂತೆ 4 ವರ್ಷ 48000ರೂ ಪಡೆಯಲಿದ್ದಾರೆ. ಶಾಲೆಯ ಶಿಕ್ಷಕರು ಸಿಸ್ಕೋ ಸಂಭ್ರಮ, ಬೆಂಗಳೂರು ಇವರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕವೃಂದ, ಶಾಲೆಯ ಆಡಳಿತ ಮಂಡಳಿ ಹಾಗೂ ಸಿಸ್ಕೋ ಸಂಭ್ರಮ ಬೆಂಗಳೂರು ಇವರು ಅಭಿನಂದಿಸಿದಿಸಿದ್ದಾರೆ.